

ನಾವು ಹೇಳಿದಂತೆಯೇ ನಮ್ಮ ಮಕ್ಕಳು ಕೇಳಬೇಕೆಂದು ತಂದೆ-ತಾಯಿ ಅಪೇಕ್ಷಿಸುತ್ತಾರೆ. ಅದೇ ರೀತಿ ಶ್ರೀಕೃಷ್ಣನೂ ಸಹ ತನ್ನ ಗೀತೆಯನ್ನು ಜನರು ಓದಬೇಕು, ಸಂದೇಶ ಅನುಸರಿಸಬೇಕು ಎಂದು ಅಪೇಕ್ಷಿಸುತ್ತಾನೆ. ದೇಗುಲಗಳಲ್ಲಿ ದರ ನಿಗದಿಯೊಂದಿಗೆ ಮಾಡಿಕೊಡುವ ದೇವರ ಸೇವೆಯೆಲ್ಲವೂ ಭಕ್ತರೇ ಮಾಡಿಕೊಂಡಿದ್ದು. ಆದರೆ, ಅನ್ನಬ್ರಹ್ಮನಾದ ಶ್ರೀಕೃಷ್ಣನಿಗೆ ಯಾವ ಬಗೆಯ ವೈಭವದ ಸೇವೆಯೂ ಬೇಕಿಲ್ಲ. ವಿಶ್ವಕ್ಕೆ ಶಾಂತಿ, ನೆಮ್ಮದಿ ನೀಡಬಲ್ಲ ಭಗವದ್ಗೀತೆಯ ಸೇವೆಯಷ್ಟೇ ಆತನಿಗೆ ಸಾಕು.