ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಕೊರಗ ಸಮುದಾಯದವರೊಂದಿಗೆ ಗ್ರಾಮ ವಾಸ್ತವ್ಯ ಕೈಗೊಂಡರು. ಪ್ರಮುಖರಾದ ಸತೀಶ್ ಕಾಳಾವರ್ಕರ್, ಅನಿತಾ ಆರ್.ಕೆ., ರವಿ ಶೆಟ್ಟಿ ಆಲೂರು ಮೊದಲಾದವರಿದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿರುವುದು, ಅವರೊಂದಿಗೆ ಸಂವಾದ ನಡೆಸಿರುವುದು ನಿಜಕ್ಕೂ ಅವಿಸ್ಮರಣೀಯ ಕ್ಷಣ. ಕೊರಗ ಸಮುದಾಯ ಅತ್ಯಂತ ಮದು ಹಾಗೂ ನಿರ್ಲಕ್ಷಿತ ಸವಾಜ ಂಬ ಭಾವನೆ ಇದೆ. ಆದರೆ ಈ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಸಮುದಾಯದ ಎಲ್ಲರೂ ಸುಶಿಕ್ಷಿತರಾಗುವುದರೊಂದಿಗೆ ಸವಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕರೆ ನೀಡಿದರು.
ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದಲ್ಲಿ ಕೊರಗ ಸಮುದಾಯದವರೊಂದಿಗೆ ಗ್ರಾಮ ವಾಸ್ತವ್ಯ ಕೈಗೊಂಡಿದ್ದ ಕೊರಗ ಸಮುದಾಯದ ಸ್ಥಳೀಯ ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಕಾರ್ಯಕ್ರಮದೊಂದಿಗೆ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು.
ಕೊರಗ ಸಮುದಾಯದ ಪ್ರಮುಖರ ಜತೆ ಸಂವಾದ ನಡೆಸಿದ ಶಾಸಕರು, ಗ್ರಾಮದಲ್ಲಿನ ಕೊರಗ ಸವಾಜದ ಸಾವಾಜಿಕ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಹಾಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳ ಬಗ್ಗೆ ವಿಚಾರ ವಿನಿಮಯ ವಾಡಿಕೊಂಡರು. ಸಮುದಾಯ ಬಂಧುಗಳ ಜತೆ ಭೋಜನ ಸವಿದರು. ಕೊರಗ ಸಮುದಾಯದ ಸುರೇಂದ್ರ ಅವರ ಮನೆಯಲ್ಲಿ ಇತರರೊಂದಿಗೆ ರಾತ್ರಿ ಗ್ರಾಮ ವಾಸ್ತವ್ಯ ಕೈಗೊಂಡರು.
ಗ್ರಾಮ ವಾಸ್ತವ್ಯ ಹಾಗೂ ಸಂವಾದದಲ್ಲಿ ಕೊರಗ ಸಮುದಾಯದ ವಕೀಲ ಸತೀಶ್ ಕಾಳಾವರ್ಕರ್, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ರವಿ ಶೆಟ್ಟಿ ಆಲೂರು ಮೊದಲಾದವರಿದ್ದರು.
ಸವಾಜದ ಮುಖ್ಯವಾಹಿನಿಗೆ ತೆರೆದುಕೊಳ್ಳುತ್ತಿರುವ ಕೊರಗ ಸವಾಜವನ್ನು ಹಿಂದೂ ಸವಾಜ ಪ್ರೀತಿಯಿಂದ ಬರವಾಡಿಕೊಳ್ಳುತ್ತಿದೆ. ಹಿಂದೂ ಸವಾಜದ ಅವಿಭಾಜ್ಯ ಅಂಗವಾಗಿರುವ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೊಸ ಪ್ರೇರಣೆ ನೀಡಿದೆ. ನೋವು ನಲಿವುಗಳನ್ನು ಅರಿತುಕೊಳ್ಳಲು ಅವಕಾಶ ವಾಡಿಕೊಟ್ಟಿದೆ.