ಶಾಲಾ ಆಟದ ಮೈದಾನ ವಿಸ್ತರಣೆಯ ಅವೈಜ್ಞಾನಿಕ ಕಾಮಗಾರಿ ಕುರಿತು ಸ್ಥಳೀಯ ಕೃಷಿಕರು ಸಹಾಯಕ ಕಮಿಷನರ್‌ಗೆ ದೂರು ನೀಡಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮೈದಾನದಲ್ಲಿ ಮಣ್ಣು ತುಂಬಿಸಿದ್ದರಿಂದ ಮಳೆಗಾಲದಲ್ಲಿ ನೀರು ಹರಿಯಲು ಜಾಗವಿಲ್ಲದೆ ಮಣ್ಣು ಕೃಷಿ ತೋಟಗಳಿಗೆ, ಸಾರ್ವಜನಿಕ ರಸ್ತೆಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿ ಹಾನಿ ಸಂಭವಿಸಿದರೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ರಾವ ಗೌಡ ಕೆರೆಮೂಲೆ, ಗಣಪತಿ ಭಟ್ ಸನ್ಯಾಸಿಗುಡ್ಡೆ, ರಾಜೀವ ರೈ ಕೋರಂಗ, ಪುಷ್ಪಾವತಿ ಶೀನಪ್ಪ ಗೌಡ, ದಿನಕರ ರೈ ವಾಣಿಪ್ಪಾಡಿ, ಕರುಣಾಕರ ರೈ ಕೋರಂಗ, ಸುರೇಶ್ ರೈವಾಣಿಪ್ಪಾಡಿ, ಕರುಣಾಕರ ರೈ ಅತ್ರೆಜಾಲು ಮೊದಲಾದ ಕೃಷಿಕರು ಮನವಿ ಸಲ್ಲಿಸಿದ್ದಾರೆ.