

ಶಿಕ್ಷಣ ವ್ಯವಸ್ಥೆಯಲ್ಲಿ ಅಪ್ಡೇಟ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಲಿಸುವ ಅನಿವಾರ್ಯ ಇಂದಿನ ಕಾಲಘಟ್ಟದಲ್ಲಿದೆ. ಶಿಕ್ಷಣ ಬದುಕಿಗೆ ಪೂರಕವಾಗಿರಬೇಕು. ಆಧುನಿಕತೆಯ ನಡುವೆ ಕೆಲವೊಂದು ದೇಶದಲ್ಲಿ ವಿದ್ಯೆಯಿದೆ ಆದರೆ ಭಾವನೆಗಳಿಲ್ಲ. ಮಂಗಳ ಅಂಗಳಕ್ಕೆ ಹೆಜ್ಜೆ ಇಟ್ಟ ನಾವು ಮನೆಯಂಗಳಕ್ಕೆ ಬಂದ ಅತಿಥಿಗಳನ್ನು ಬರ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ನೈತಿಕ ಮೌಲ್ಯ, ಸಂಸ್ಕಾರವಂತ ಶಿಕ್ಷಣ ಇಂದಿನ ಯುವ ಜನತೆಗೆ ನೀಡುವ ಅಗತ್ಯವಿದೆ.