ಶ್ರೀಕೃಷ್ಣ ಮಠದಲ್ಲಿದ್ದ ಹನುಮನ ವಿಗ್ರಹ ಸ್ಥಳಾಂತರ

ಶೀರೂರು ಮೂಲ ಮಠಕ್ಕೆ ಸ್ಥಳಾಂತರ ಮಾಡಿರುವ ಉಡುಪಿ ಶ್ರೀಕೃಷ್ಣ ಮಠದ ಹೊರಾಂಗಣದಲ್ಲಿದ್ದ 'ಪಂಚಮುಖಿ ಹನುಮಂತ'ನ ವಿಗ್ರಹ.
ಶೀರೂರು ಮೂಲ ಮಠಕ್ಕೆ ಸ್ಥಳಾಂತರ ಮಾಡಿರುವ ಉಡುಪಿ ಶ್ರೀಕೃಷ್ಣ ಮಠದ ಹೊರಾಂಗಣದಲ್ಲಿದ್ದ 'ಪಂಚಮುಖಿ ಹನುಮಂತ'ನ ವಿಗ್ರಹ.
Published on

* ಪರ್ಯಾಯ ಶೀರೂರು ಮಠದ ದಿವಾನ ಸ್ಪಷ್ಟನೆ

* ಪ್ರಾಣ ಪ್ರತಿಷ್ಠಾಪನೆ ಮಾಡದ ಮೂರ್ತಿಯದು

ಉಡುಪಿ: ಶ್ರೀಕೃಷ್ಣ ಮಠದ ಹೊರಾಂಗಣದ ನವಗೃಹಗುಡಿಯ ಪಕ್ಕದಲ್ಲಿದ್ದ 'ಪಂಚಮುಖಿ ಹನುಮಂತ'ನ ವಿಗ್ರಹವನ್ನು ಶೀರೂರುನಲ್ಲಿರುವ ಮೂಲ ಮಠಕ್ಕೆ ಶುಕ್ರವಾರ (ಸೆ.11) ಸ್ಥಳಾಂತರಿಸಲಾಗಿದೆ. 
ಶೀರೂರು ಮಠದ ಹಿಂದಿನ ಯತಿಗಳಾಗಿದ್ದ ಲಕ್ಷ್ಮೀವರ ತೀರ್ಥರ ಪರ್ಯಾಯದ ಸಂದರ್ಭದಲ್ಲಿ ಮಠದ ಭಕ್ತರೊಬ್ಬ ಮನೆಯಲಿದ್ದ ಪಂಚಮುಖಿ ವಿಗ್ರಹವನ್ನು ಮಠಕ್ಕೆ ನೀಡಿದ್ದರು ಎನ್ನಲಾಗಿದೆ. ದೇವರ ಮೂರ್ತಿಯಾಗಿದ್ದ ಕಾರಣದಿಂದ ಅದನ್ನು ಮಠದೊಳಗೆ ಇಡಲಾಗಿತ್ತು. ಆದರೆ, ಆ ಮೂರ್ತಿಯನ್ನು ಪ್ರತಿಷ್ಠಾಪಿಸಿರಲಿಲ್ಲ ಎಂದು ತಿಳಿದು ಬಂದಿದೆ. 

ಮಠದಲ್ಲಿ ಅಭಿವೃದ್ಧಿ ಕಾರ್ಯ

ಶೀರೂರು ಮಠದ ಪರ್ಯಾಯ ಆರಂಭವಾದ ಬಳಿಕ ದೇಗುಲದ ಸುತ್ತ ವಿವಿಧ ಅಭಿವೃದ್ಧಿ ಕಾರ್ಯ, ಕೃಷ್ಣನ ದರ್ಶನಕ್ಕೆ ಬರುವ ಭಕ್ತರಿಗೆ ವಿವಿಧ ಸೌಲಭ್ಯ, ಸರತಿ ಸಾಲು ನಿಲ್ಲುವ ಸ್ಥಳದಲ್ಲಿ ಬಿಸಿಲು, ಮಳೆ ತಾಗದಂತೆ ಮಧ್ವ ಸರೋವರದ ಬಳಿ ಮೇಲ್ಛಾವಣಿ ಹೀಗೆ ಅನೇಕ ಸೌಕರ್ಯ ಒದಗಿಸಲಾಗಿದೆ. ದೇಗುಲದ ಒಳಗೂ ಸಮರ್ಪಕ ಕಾರ್ಯಯೋಜನೆ ಆಯೋಜಿಸುವ ನಿಟ್ಟಿನಲ್ಲಿ ಅಲ್ಲಿದ್ದ ಪಂಚಮುಖಿ ಹನುಮಂತನ ಮೂರ್ತಿಯನ್ನು ಸದುದ್ದೇಶದಿಂದ ಸ್ಥಳಾಂತರಿಸಲಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​

ಮಠದೊಳಗೆ ಇದ್ದ ಪಂಚಮುಖಿ ಹನುಮಂತನ ಮೂರ್ತಿಯನ್ನು ತೆರವು ಮಾಡಿದ ಬಳಿಕ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್​ ಆಗತೊಡಗಿದೆ. ಇದು ಮಠಕ್ಕೆ ಬರುವ ಭಕ್ತರಿಗೆ ಆತಂಕ ಸೃಷ್ಟಿಸಿದ್ದು, ನೆಮ್ಮದಿಯೂ ಕೆಡಿಸಿದೆ. ಮಠದಲ್ಲಿ ಈ ಹಿಂದೆ ಕೇಳಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಈ ವಿಗ್ರಹವನ್ನು ತೆಗೆದು ಹರಿಯುವ ನೀರಿನಲ್ಲಿ ವಿಸರ್ಜಿಸುವಂತೆ ಹೇಳಲಾಗಿತ್ತು. ಅದಕ್ಕೆ ವಿಗ್ರಹ ತೆರವು ಮಾಡಿ ಶೀರೂರು ನದಿಯಲ್ಲಿ ಬಿಡಲಾಗಿದೆ. ಇದು ಭಕ್ತರ ಮನಸ್ಸಿಗೆ ಘಾಸಿ ಮಾಡಿದೆ ಎಂಬಿತ್ಯಾದಿಯಾಗಿ ತಿಳಿಸಿ ವೈರಲ್​ ಮಾಡಲಾಗುತ್ತಿದೆ. ಇದನ್ನು ಭಕ್ತರು ನಂಬಬಾರದು. ಭಕ್ತರಿಗೆ ಯಾವುದೇ ತೊಂದರೆ ಆಗದು ಎಂದು ಶೀರೂರು ಮಠ ಸ್ಪಷ್ಟಪಡಿಸಿದೆ.
"

ಶ್ರೀಕೃಷ್ಣ ಮಠದೊಳಗೆ ಇದ್ದ ಪಂಚಮುಖಿ ಹನುಮಂತನ ಮೂರ್ತಿಯು ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಲ್ಲ. ಮಠದೊಳಗೆ ಮುಖ್ಯಪ್ರಾಣ ಹಾಗೂ ಭೋಜನ ಶಾಲೆಯ ಬಳಿ ಪ್ರತಿಷ್ಠಾಪಿತ ಹನುಮನ ವಿಗ್ರಹವಿದೆ. ಹೀಗಾಗಿ ಪ್ರತಿಷ್ಠಾಪನೆ ಮಾಡದ ಈ ಮೂರ್ತಿಯನ್ನು ತೆರವು ಮಾಡಿ ಶೀರೂರು ಮೂಲ ಮಠದಲ್ಲಿ ಇಟ್ಟಿದ್ದೇವೆ. ಅನಗತ್ಯ ಯಾರೂ ಮಿಥ್ಯಾರೋಪ ನಂಬಬಾರದು. ವಿಟ್ಲಪಿಂಡಿಯ ದಿನದಂದು ಉತ್ಸವದ ಮೆರವಣಿಗೆ ಮುಗಿದ ಬಳಿಕ ಕೃಷನ್ಣ ಮೃಣ್ಮಯ (ಮಣ್ಣಿನ) ಮೂರ್ತಿ ಕೆಳಗೆ ಬಿದ್ದಿರುವುದು ಆಕಸ್ಮಿಕ. ಆಗಿರುವ ಅಚಾತುರ್ಯಕ್ಕೆ ಪ್ರಾಯಶ್ಚಿತ್ತ ಹೋಮ-ಪೂಜೆ ನಡೆಸಲಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net