ಆಸ್ಪತ್ರೆ ಕಟ್ಟಡವೇ ರೋಗಗ್ರಸ್ತ!

 ಕುಂದಾಪುರ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಕಟ್ಟಡಗಳು ಶಿಥಿಲವಾಗಿರುವುದು.
ಕುಂದಾಪುರ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಕಟ್ಟಡಗಳು ಶಿಥಿಲವಾಗಿರುವುದು.
Published on

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ರೋಗಿಗಳ ಸೇವೆಯಲ್ಲಿ ಮುಂಚೂಣಿಯಲ್ಲಿರುವ, ಉತ್ತಮ ವೈದ್ಯಕೀಯ ಸೇವೆಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪುರಸ್ಕಾರ ಪಡೆದ ಕುಂದಾಪುರ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಹೆಂಚಿನ ವಾಡಿನ 5 ಪ್ರಮುಖ ಕಟ್ಟಡ ಸಮುಚ್ಚಯ ನೆಲಕ್ಕೊರಗುವ ಭೀತಿಯಲ್ಲಿದೆ.
ಔಷಧ ಸಂಗ್ರಹಣಾ ಕೊಠಡಿ, ಕ್ಷಯರೋಗ ತಪಾಸಣೆ ಕೇಂದ್ರ, ಎಆರ್‌ಟಿ ಸೆಂಟರ್ ಕಟ್ಟಡ, ಡಯಾಲಿಸಿಸ್ ಕೇಂದ್ರ, ಫಿಸಿಯೋಥೆರಪಿ, ಹಳೆಯ ಜನರಲ್ ವಾರ್ಡ್ ಹಳೆಯ ಕಟ್ಟಡದಲ್ಲಿದೆ. ಹೆಂಚಿನ ಕಟ್ಟಡಗಳು ಶಿಥಿಲಾವಸ್ಥೆದಲ್ಲಿದ್ದು, ಇಂದೋ ನಾಳೆಯೋ ಎಂಬಂತಿವೆೆ. ಸೂರು ಜರ್ಜರಿತಗೊಂಡಿದ್ದು, ಪಕ್ಕಾಸು, ರೀಪುಗಳಿಗೆ ಗೆದ್ದಲು ಹಿಡಿದಿದೆ. ಸುಸಜ್ಜಿತ ಕಟ್ಟಡದ ಹಿಂಬದಿಯಲ್ಲಿರುವ ಈ ಕಟ್ಟಡಗಳು ಹೊಸ ಕಟ್ಟಡಕ್ಕೆ ಸಂಪರ್ಕ ಹೊಂದಿದ್ದು, ನೆಲಕ್ಕೊರಗಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ತಿಂಗಳಲ್ಲಿ 10 ಸಾವಿರಕ್ಕೂ ಮಿಕ್ಕಿ ರೋಗಿಗಳು ಬಂದು ಹೋಗುವ ಆಸ್ಪತ್ರೆಯ ಕಟ್ಟಡಗಳ ದುಸ್ಥಿತಿ ವೈದ್ಯರು, ಸಿಬ್ಬಂದಿ ಮತ್ತು ರೋಗಿಗಳನ್ನು ಭಯದ ನೆರಳಿಗೆ ತಳ್ಳಿದೆ. 1961ರಲ್ಲಿ ನಿರ್ಮಾಣವಾಗಿರುವ ಹಳೆಯ ಮುಖ್ಯ ಕಟ್ಟಡ ನಿರ್ವಹಣೆ ವಾಡಲಾಗದಷ್ಟು ಹದಗೆಟ್ಟು ಹೋಗಿದೆ.

ಮಾಸಿಕ 10,684 ಹೊರರೋಗಿಗಳು

ವಾಸಿಕ ಅಂದಾಜು 10,684 ಹೊರರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿರಕ್ಕೂ ಮಿಕ್ಕಿ ಒಳರೋಗಿಗಳಿದ್ದಾರೆ. 100ಕ್ಕೂ ಹೆಚ್ಚು ಹೆರಿಗೆಗಳು ನಡೆಯುತ್ತಿವೆ. ನಾಡೋಜ ಡಾ.ಜಿ.ಶಂಕರ್ 100 ಹಾಸಿಗೆಗಳ ಸಾಮರ್ಥ್ಯವಿರುವ, ಸುಸಜ್ಜಿತ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಾರ್ಡ್ ಕಟ್ಟಡ ಕೊಡುಗೆಯಾಗಿ ನೀಡಿದ್ದಾರೆ.

ಸೌಕರ್ಯವಿದ್ದರೂ ತಪ್ಪದ ಗಂಡಾಂತರ

ಐಸಿಯು, ಡಯಾಲಿಸಿಸ್ ಕೇಂದ್ರ, ತುರ್ತು ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ, ವಿಶೇಷ ಮಕ್ಕಳ ಚಿಕಿತ್ಸಾ ಟಕ, ರೇಡಿಯಂಟ್ ವಾರ್ಮರ್‌ಗಳು, ೆಟೋಥೆರಪಿ ಟಕಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪುನರ್ವಸತಿ ಕೇಂದ್ರ, ಡಿಜಿಟಲ್ ಎಕ್ಸ್‌ರೇ ರವಾನಿಸುವ ಇ-ಆಸ್ಪತ್ರೆ ಸೌಲಭ್ಯ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಔಟ್ರೀಚ್ ಸೆಂಟರ್, ಸುಸಜ್ಜಿತ ಶವಾಗಾರ ಸಹಿತ ಹತ್ತು ಹಲವು ಅನುಕೂಲಗಳಿದ್ದು, ಕಟ್ಟಡವೇ ನೆಟ್ಟಗೆ ಇಲ್ಲದಿರುವುದು ಗಂಡಾಂತರ ಸಷ್ಟಿಸಿದೆ.

ಔಷಧ ಸಂಗ್ರಹಣಾ ಕೊಠಡಿ, ಕ್ಷಯರೋಗ ತಪಾಸಣೆ ಕೇಂದ್ರ, ಎಆರ್‌ಟಿ ಸೆಂಟರ್ ಕಟ್ಟಡ, ಡಯಾಲಿಸಿಸ್ ಕೇಂದ್ರ, ಫಿಸಿಯೋಥೆರಪಿ ಕೇಂದ್ರವನ್ನೊಳಗೊಂಡ ಆಸ್ಪತ್ರೆಯ ಹಳೆಯ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿವೆ. ಹೊಸ ಕಟ್ಟಡ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೂತನ ಕಟ್ಟಡ ನಿರ್ವಾಣ ಆದಲ್ಲಿ ರೋಗಿಗಳಿಗೆ ಇನ್ನೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ.

— ಡಾ.ಪ್ರೇಮಾನಂದ ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net