ಇನ್ನೇನು ಕೆಲವೇ ದಿನಗಳಲ್ಲಿ ಜಿಲ್ಲೆಗೆ ಮಳೆಗಾಲ ಪ್ರವೇಶಿಸಲಿದ್ದು, ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ವಿಸ್ತರಣೆ ಕಾಮಗಾರಿ ನಡೆದಿರುವ ಕುಡುಪು, ಕೆತ್ತಿಕಲ್, ನೂಯಿ, ಕೈಕಂಬ ಜಂಕ್ಷನ್, ಗಂಜಿಮಠ-ಎಡಪದವು ಪ್ರದೇಶದಲ್ಲಿ ದೊಡ್ಡಮಟ್ಟದ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ಇದೆ. ಇಲ್ಲೆಲ್ಲ ಗುಡ್ಡದ ನೀರು ಸರಾಗವಾಗಿ ಹರಿದಾಡಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.