ಬೆಟ್ಟಂಪಾಡಿ ಗುತ್ತು ಚಾವಡಿಯಲ್ಲಿ ನಡೆದ ದೈವಗಳ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಗುರುಪ್ರಸಾದ್ ರೈ, ಪ್ರದೀಪ್ ಹೆಗ್ಡೆ, ರಾಧಾಕೃಷ್ಣ ರೈ ಇತರರಿದ್ದರು.
Published on:
Copied
Follow Us
ಪುತ್ತೂರು ಗ್ರಾಮಾಂತರ: ತುಳುನಾಡಿನ ಭವ್ಯ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ತರವಾಡು, ಧರ್ಮಚಾವಡಿಗಳ ಪಾತ್ರ ವಿಶೇಷವಾದುದು. ವ್ಯಕ್ತಿಗೆ ಸಂಸ್ಕಾರ ನೀಡಿದಾಗ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಸಂಪ್ರದಾಯ ಮತ್ತು ಭವಿಷ್ಯದ ಮಧ್ಯೆ ಸಂಸ್ಕೃತಿಯ ಕೊಂಡಿಯಾಗಿ ತರವಾಡು ಕಾರ್ಯನಿರ್ವಹಿಸುತ್ತಿದೆ. ತ್ಯಾಗ ಮತ್ತು ಸೇವೆಯ ಮೌಲ್ಯ ಕಾಪಾಡಿಕೊಂಡರೆ ಜೀವನಕ್ಕೆ ವಿಶೇಷ ಮೌಲ್ಯ ಬರುತ್ತದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಬೆಟ್ಟಂಪಾಡಿ ಗುತ್ತು ಚಾವಡಿಯಲ್ಲಿ ಶುಕ್ರವಾರ ನಡೆದ ದೈವಗಳ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಳಿನ್‌ಕುಮಾರ್, ಕೃಷಿಕ ಮೊರಂಗಲ್ಲು ಗುರುಪ್ರಸಾದ್ ರೈ, ಪ್ರದೀಪ್ ಹೆಗ್ಡೆ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಮಾತನಾಡಿದರು. ನಿವೃತ್ತ ಸೈನಿಕರಾದ ಅರಿಯಡ್ಕ ಕಿರಣ್ ರೈ ಬಿಜಳ ಮತ್ತು ನವೀನ್ ರೈ ಬಿಜಳ ಅವರನ್ನು ಸನ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಆನಾಜೆ ಅಧ್ಯಕ್ಷತೆ ವಹಿಸಿದ್ದರು. ಗುತ್ತು ಮನೆತನದ ಹಿರಿಯರಾದ ಚಂದ್ರಾವತಿ ರೈ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ರೈ ಗುತ್ತು, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ರಂಗನಾಥ ರೈ ಗುತ್ತು ಮತ್ತಿತರರು ಇದ್ದರು. ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಡಾ.ಮೋಹನದಾಸ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ಶೆಟ್ಟಿ ವಂದಿಸಿದರು. ಡಾ.ವಿದ್ಯಾ ಮೋಹನ್‌ದಾಸ್ ರೈ ಮತ್ತು ಡಾ.ಆಸ್ತಿಕಾ ರೈ ಕಾರ್ಯಕ್ರಮ ನಿರೂಪಿಸಿದರು.