ಗುರುವಿಗಿದೆ ಅತ್ಯುನ್ನತ ಸ್ಥಾನ

 ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ವರ್ಷಿಣಿ ಪೈ ಮಾತನಾಡಿದರು. ಪ್ರಮುಖರಾದ ಕಮಲಾಕ್ಷ ಪೈ, ಹರ್ಷ ಕೋಟೇಶ್ವರ, ಅನ್ವಿತಾ ಮೊದಲಾದವರಿದ್ದರು.
ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ವರ್ಷಿಣಿ ಪೈ ಮಾತನಾಡಿದರು. ಪ್ರಮುಖರಾದ ಕಮಲಾಕ್ಷ ಪೈ, ಹರ್ಷ ಕೋಟೇಶ್ವರ, ಅನ್ವಿತಾ ಮೊದಲಾದವರಿದ್ದರು.
Published on
ಕೋಟ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾದದ್ದು. ಗುರುಗಳು ಕೇವಲ ಪಾಠ ಬೋಧಿಸುವವರಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದು ಸಾಲಿಗ್ರಾಮ ಫ್ಲೈಯಿಂಗ್ ಕೈಟ್ಸ್ ಕಿಂಡರ್ ಗಾರ್ಟನ್ ಪ್ರೀ ಪ್ರೈಮರಿ ಶಾಲಾ ಪ್ರಾಂಶುಪಾಲೆ ವರ್ಷಿಣಿ ಪೈ ಹೇಳಿದರು.
ತೆಕ್ಕಟ್ಟೆ ವಿದ್ಯಾಗಿರಿ ಸೇವಾ ಸಂಗಮ ವಿದ್ಯಾಕೇಂದ್ರದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕಮಲಾಕ್ಷ ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಹರ್ಷ ಕೋಟೇಶ್ವರ ಮೊದಲಾದವರಿದ್ದರು. ಅನ್ವಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಅದಿತಿ ಕೆ.ವಿ. ನಿರೂಪಿಸಿದರು. ಸಾನಿಧ್ಯಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net