ಆರೋಗ್ಯ ರಕ್ಷಣೆಗೆ ಯೋಗಾಸನ ಮಹತ್ತರ ಪಾತ್ರ

 ಕಾಸರಗೋಡು ಜಿಲ್ಲಾ ಯೋಗಾಸನ ಚಾಂಪಿಯನ್‌ಶಿಪ್‌ನ್ನು ಚಿನ್ಮಯ ಮಿಷನ್ ಅಧ್ಯಕ್ಷ ಸ್ವಾಮಿ ವಿವೇಕಾನಂದ ಸರಸ್ವತಿ ಉದ್ಘಾಟಿಸಿದರು. ಕೇರಳದ ಯೋಗಾಸನ ಕ್ರೀಡಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ರವಿಶಂಕರ್, ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ ಸಿ.ಚಂದ್ರನ್ ಮೊದಲಾದವರಿದ್ದರು.

Published on
ಕಾಸರಗೋಡು: ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗಾಸನದ ಪಾತ್ರ ಮಹತ್ವದ್ದಾಗಿದೆ. ಯುವ ಪೀಳಿಗೆಯಲ್ಲಿ ಆರೋಗ್ಯಕರ ಜೀವನಶೈಲಿ ಬೆಳೆಸುವುದು ಕಾರ್ಯಕ್ರಮದ ಉದ್ದೇಶ ಎಂದು ಕೇರಳಂ ಚಿನ್ಮಯ ಮಿಷನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತೀ ಹೇಳಿದರು.
ಯೋಗಾಸನ ಕಾಸರಗೋಡು ಜಿಲ್ಲಾ ಸಂಘದ ನೇತೃತ್ವದಲ್ಲಿ ಕಾಞಂಗಾಡಿನ ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲಾದ ಏಳನೇ ಜಿಲ್ಲಾ ಯೋಗಾಸನ ಚಾಂಪಿಯನ್‌ಷಿಪ್ ಉದ್ಘಾಟಿಸಿ ಮಾತನಾಡಿದರು.
ಯೋಗಾಸನ ಕ್ರೀಡಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಯೋಗಾಚಾರ್ಯ ಶಂಭು ನಂಬೂದಿರಿ ಮತ್ತು ರಾಷ್ಟ್ರೀಯ ತೀರ್ಪುಗಾರರ ಅನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ ಸಿ.ಚಂದ್ರನ್ ಮತ್ತು ಯೋಗಾಸನ ಕಾಸರಗೋಡು ಸಂಘಟನೆ ಪೋಷಕ ಡಾ.ಶಿವರಾಯ ಭಟ್ ಉಪಸ್ಥಿತರಿದ್ದರು. ಅಧ್ಯಕ್ಷೆ ತೇಜ ಕುಮಾರಿ ಸ್ವಾಗತಿಸಿದರು. ಪಿ.ಅನಿಲ್ ಕುಮಾರ್ ವಂದಿಸಿದರು.
ವಿವಿಧ ವಯೋಮಾನದ ವಿಭಾಗಗಳಲ್ಲಿ ಯೋಗಾಸನ ಸ್ಪರ್ಧೆ ನಡೆಯಿತು. ಸಾಂಪ್ರದಾಯಿಕ, ಕಲಾತ್ಮಕ, ಲಯಬದ್ಧ ಇತ್ಯಾದಿ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಕೌಶಲ ಪ್ರದರ್ಶಿಸಿದರು.
*ಫೋಟೋ ಇದೆ: ಕೆಎಸ್‌ಡಿ-8ಜೂನ್-ಯೋಗ:
ಕಾಸರಗೋಡು ಜಿಲ್ಲಾ ಯೋಗಾಸನ ಚಾಂಪಿಯನ್‌ಶಿಪ್‌ನ್ನು ಚಿನ್ಮಯ ಮಿಷನ್ ಅಧ್ಯಕ್ಷ ಸ್ವಾಮಿ ವಿವೇಕಾನಂದ ಸರಸ್ವತಿ ಉದ್ಘಾಟಿಸಿದರು. ಕೇರಳದ ಯೋಗಾಸನ ಕ್ರೀಡಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ರವಿಶಂಕರ್, ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ ಸಿ.ಚಂದ್ರನ್ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net