

ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಸಮಯ ನಿಗದಿಪಡಿಸಿ ವರ್ಷದ ಹಿಂದೆಯೇ ಆರ್‌ಟಿಒಗೆ ಅರ್ಜಿ ಹಾಕಲಾಗಿದೆ. ಆರ್‌ಟಿಒದಿಂದ ಅನುಮತಿ ಬಂದಿಲ್ಲ, ಅನುಮತಿ ಸಿಕ್ಕಿದ ಕೂಡಲೇ ಇನೋಳಿಗೆ ಬಸ್ ಸಂಚಾರ ಆರಂಭಗೊಳ್ಳಲಿದೆ.
ಮಂಗಳೂರಿಗೆ ಬಂದು ನಾಲ್ಕು ತಿಂಗಳಷ್ಟೇ ಆಗಿದೆ. ಕೆಎಸ್ಸಾರ್ಟಿಸಿಟಿಸಿಯಿಂದ ಬಂದಿರುವ ಕಡತದ ಬಗ್ಗೆ ಮಾಹಿತಿಯಿಲ್ಲ, ತಕ್ಷಣ ಪರಿಶೀಲನೆ ನಡೆಸಿ ಯಾವುದಾದರೂ ಕಡತ ಬಾಕಿಯಿದ್ದರೆ ವಿಲೇವಾರಿ ಮಾಡಲಾಗುವುದು.
ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನ ಮಹಿಳೆಯರಿಗೆ ಸಿಗಬೇಕೆನ್ನುವುದು ನಮ್ಮ ಆಶಯ. ನಾನು ಅಧ್ಯಕ್ಷನಾಗಿದ್ದ ಸಂದರ್ಭ ತಾಪಂ ಮಾಜಿ ಅಧ್ಯಕ್ಷರ ಜತೆ ಕೆಎಸ್ಸಾರ್ಟಿಸಿ ಅಧಿಕಾರಿಗಳನ್ನು ಭೇಟಿಯಾದಾಗ ಕೆಲವು ಕಾರಣಗಳನ್ನು ನೀಡಿದ್ದರು. ಶಾಸಕರೂ ಸರ್ಕಾರಿ ಬಸ್ಸಿನ ಭರವಸೆ ನೀಡಿದ್ದಾರೆ.
ಪಾವೂರು ಗ್ರಾಮಕ್ಕೆ ಟೈಮಿಂಗ್ ಆಗಿ ವರ್ಷವಾದರೂ ಬಸ್ ಬಾರದಿರುವುದರ ಹಿಂದಿರುವ ಕಾರಣವೇನು? ಹಲವು ಗ್ರಾಮಸಭೆಗಳಲ್ಲಿ ಪ್ರಸ್ತಾಪವೂ ಆಗಿ ಭರವಸೆ ಮಾತ್ರ ಸಿಕ್ಕಿದೆ. ಈಗ ಗ್ರಾಮಸ್ಥರು ಸಹಿ ಸಂಗ್ರಹ ಆರಂಭಿಸಿದ್ದು ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಆದೇಶ ನೀಡಬೇಕು.