ಸುಬ್ರಹ್ಮಣ್ಯ: ಆಧುನಿಕ ಯುಗದಲ್ಲಿ ಶಿಸ್ತಿನ ಅನುಷ್ಠಾನದಿಂದ ಯುವಜನಾಂಗದ ಭವಿಷ್ಯ ಉಜ್ವಲವಾಗುತ್ತದೆ. ಎಳವೆಯಲ್ಲಿಯೇ ನಾಯಕತ್ವದ ಅರಿವು ಮೂಡಿಸಲು ವಿದ್ಯಾರ್ಥಿ ಸಂಘಗಳು ಸಹಕಾರಿ ಎಂದು ಕಲಾವಿದ ಕೆ.ಯಜ್ಞೇಶ್ ಆಚಾರ್ ಹೇಳಿದರು.
ಸುಬ್ರಹ್ಮಣ್ಯದ ಎಸ್.ಎಸ್.ಪಿಯು ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ನಾಯಕ ಬಿಪಿನ್ ಐ.ಕೆ., ಉಪಾಧ್ಯಕ್ಷೆ ಚಿಂತನಾ ಕೆ., ಕಾರ್ಯದರ್ಶಿ ಆಕಾಶ್ ಪ್ರಕಾಶ್, ಸಾಂಸ್ಕೃತಿಕ ನಿರ್ದೇಶಕಿ ಮೋನಿಷಾ ರೈ, ಕ್ರೀಡಾ ಕಾರ್ಯದರ್ಶಿ ಮನ್ವಿತ್ ಎ.ಜೆ., ಇತರ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಎಸ್.ಕಾಲೇಜಿನ ಉಪನ್ಯಾಸಕ ಉದಯ ಕುಮಾರ್, ಮಾಜಿ ಗ್ರಾಪಂ ಸದಸ್ಯೆ ಭಾರತಿ ದಿನೇಶ್, ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಜೇಶ್ ಎನ್.ಎಸ್., ವಿದ್ಯಾರ್ಥಿ ಸಂಘ ಸಂಚಾಲಕ ಜಯಪ್ರಕಾಶ್ ಆರ್., ಸಾಂಸ್ಕೃತಿಕ ಸಂಘ ಸಂಚಾಲಕಿ ರೇಖಾರಾಣಿ ಸೋಮಶೇಖರ್ ಉಪಸ್ಥಿತರಿದ್ದರು.