ಕೃಷಿ ಸಲಕರಣೆಗಳು, ದೇಶೀಯ ಗೋ ತಳಿಗಳ ಉತ್ಪನ್ನಗಳು, ಕ್ಷಣ ಮಾತ್ರದಲ್ಲಿ ಬಟ್ಟೆಯ ಕಲೆ ತೆಗೆಯುವ ರಾಸಾಯನಿಕ ಮಾರಾಟ, ಮನೆಯಲ್ಲಿ ಉತ್ಪಾದಿಸುವ ನಾನಾ ಖಾದ್ಯಗಳ ಮಾರಾಟ, ರೈತರಿಗೆ ಮತ್ತು ಗೃಹ ಬಳಕೆಗೆ ಬೇಕಾಗುವ ಸಲಕರಣೆಗಳ ಮಾರಾಟ, ಅವಿಭಕ್ತ ಕುಟುಂಬದಂತೆ ಮನೆ ಮಂದಿಯೊಂದಿಗೆ ಸ್ಥಳದಲ್ಲಿ ಮಾಡಿಕೊಡುವ ಹೋಳಿಗೆ, ಬಗೆಬಗೆಯ ತಿಂಡಿ ತಿನಿಸುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. 3 ದಿನಗಳ ಮೇಳದ ಎಲ್ಲ ಮಳಿಗೆಯವರಿಗೆ ಉತ್ತಮ ವ್ಯವಹಾರ ಮತ್ತು ಗ್ರಾಹಕರಿಗೆ ತಮಗಿಷ್ಟವಾದ ವಸ್ತುಗಳು, ತಿನಿಸುಗಳು ಲಭಿಸುವುದರೊಂದಿಗೆ ಮೇಳವು ಯಶಸ್ವಿ ಹಾಗೂ ಜನೋಪಯೋಗಿಯಾಯಿತು.