ಕರ್ಷಕ ಮೋರ್ಚಾ ವತಿಯಿಂದ ಕೃಷಿಕರ ದಿನಾಚರಣೆಯಲ್ಲಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ಸುಕುವಾರನ್ ಕಾಲಿಕ್ಕಡವು, ಬಾಲಕೃಷ್ಣ ಶೆಟ್ಟಿ ಕೆ., ಅಶ್ವಿನಿ ಕೆ.ಎಂ. ಮತ್ತಿತರರು ಇದ್ದರು.
Published on:
Copied
Follow Us
ಬದಿಯಡ್ಕ: ನಾಡಿಗೆ ಅನ್ನ ನೀಡುವ ರೈತನೇ ಸ
ಮಾ
ಜದ ನಿಜವಾದ ಶಕ್ತಿ. ಬದಲಾಗುತ್ತಿರುವ ಕಾಲಟ್ಟದಲ್ಲಿ ರೈತರ ಆರ್ಥಿಕ ಭದ್ರತೆ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಗೆ ಸೂಕ್ತ ಬೆಂಬಲ ಅಗತ್ಯ ಎಂದು ಕರ್ಷಕ ಮೋರ್ಚಾ ಜಿಲ್ಲಾ ಅಧ್ಯಕ್ಷ ಸುಕು
ಮಾ
ರನ್ ಕಾಲಿಕ್ಕಡವು ತಿಳಿಸಿದರು.
ಬಿಜೆಪಿ ಕರ್ಷಕ ಮೋರ್ಚಾ ಬದಿಯಡ್ಕ ಮಂಡಲ ಸಮಿತಿಯಿಂದ ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ಕಚೇರಿಯಲ್ಲಿ ಕೃಷಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರವು ಕೃಷಿಕರ ಏಳಿಗೆಗಾಗಿ ಜಾರಿಗೆ ತಂದಿರುವ ವಿವಿಧ ಸಬ್ಸಿಡಿ, ಭದ್ರತಾ ಯೋಜನೆಗಳು ಹಾಗೂ ತಂತ್ರಜ್ಞಾನ ಆಧಾರಿತ ನೆರವು ಪ್ರತಿಯೊಬ್ಬ ಕೃಷಿಕನಿಗೂ ತಲುಪುವಂತಾಗಬೇಕು ಎಂದರು.
ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆ.ಎಂ., ಕರ್ಷಕ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಭಾನು ನಾಯರ್, ಪ್ರಭಾಕರನ್ ಎಂ.ಕೆ., ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಉದನೇಶ್ವರ ಬಿ. ಉಪಸ್ಥಿತರಿದ್ದರು.
ಸದಸ್ಯ ಶ್ಯಾಮ ಆಳ್ವ ಕಡಾರು ಸ್ವಾಗತಿಸಿದರು. ಮಂಡಲ ಉಪಾಧ್ಯಕ್ಷ ರಾಧಾಕೃಷ್ಣ ಕೆದಿಲಾಯ ವಂದಿಸಿದರು. ಸಾಧಕ ಕೃಷಿಕರಾದ ವೆಂಕಟನಾಥ ಸ್ವಾಮಿ ಬಾಜಿರ್‌ತೊಟ್ಟಿ, ನಾರಾಯಣ ತಾರ್ಲೆ, ಹರಿಪ್ರಸಾದ ರೈ ಮುನಿಯೂರು ಅವರನ್ನು ಸನ್ಮಾನಿಸಲಾಯಿತು.