ಮರೆಯಾಗುತ್ತಿರುವ ಕೃಷಿ ಬದುಕು

ತೋಕೂರು ಬಡಗಬೆಟ್ಟು ಗದ್ದೆಯಲ್ಲಿ 5ನೇ ವರ್ಷದ ‘ಬಲೇ ಕೆಸರ್ಡ್ ಗೊಬ್ಬುಗ’ ಕಾರ್ಯಕ್ರಮ ನಡೆಯಿತು. ಶಾಸಕ ಉಮನಾಥ ಕೋಟ್ಯಾನ್, ಕಿನ್ನಿಗೋಳಿ ಪಪಂ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಮೊದಲಾದವರು ಉಪಸ್ಥಿತರಿದ್ದರು.
ತೋಕೂರು ಬಡಗಬೆಟ್ಟು ಗದ್ದೆಯಲ್ಲಿ 5ನೇ ವರ್ಷದ ‘ಬಲೇ ಕೆಸರ್ಡ್ ಗೊಬ್ಬುಗ’ ಕಾರ್ಯಕ್ರಮ ನಡೆಯಿತು. ಶಾಸಕ ಉಮನಾಥ ಕೋಟ್ಯಾನ್, ಕಿನ್ನಿಗೋಳಿ ಪಪಂ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಮೊದಲಾದವರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಾಲ ಕಳೆದಂತೆಲ್ಲಾ ನಮ್ಮ ಕೃಷಿ ಬದುಕು ಮರೆಯಾಗುತ್ತಿದೆ. ಇನ್ನಷ್ಟು ಗಟ್ಟಿಗೊಳಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ತೋಕೂರು ಬಡಗಬೆಟ್ಟು ಗದ್ದೆಯಲ್ಲಿ ಪಕ್ಷಿಕೆರೆ ಶ್ರೀ ವಿನಾಯುಕ ಮಿತ್ರ ಮಂಡಳಿ, ಶ್ರೀ ವಿನಾಯಕ ಮಹಿಳಾ ಮಂಡಳಿ, ಕಿನ್ನಿಗೋಳಿ ಅಲಯನ್ಸ್ ಕ್ಲಬ್ ಆಶ್ರಯದಲ್ಲಿ 5ನೇ ವರ್ಷದ ‘ಬಲೇ ಕೆಸರ್ಡ್ ಗೊಬ್ಬುಗ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಪಪಂ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಅಧ್ಯಕ್ಷತೆ ವಹಿಸಿದ್ದರು. ಪಂಜ ವಾಸುದೇವ ಭಟ್ ಶುಭಹಾರೈಸಿದರು. ದ.ಕ. ಮೈ ಭಾರತ್‌ಸಂಸ್ಥೆ ಜಗದೀಶ್, ಪಡುಪಣಂಬೂರು ಪಿಡಿಒ ಸುಧೀರ್, ಕಿನ್ನಿಗೋಳಿ ಅಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಆಚಾರ್ಯ, ಪಕ್ಷಿಕೆರೆ ಆತ್ಮಶಕ್ತಿ ವಿವಿದ್ಧೊದ್ದೇಶ ಸಹಕಾರಿ ಸಂಘ ಅಧ್ಯಕ್ಷ ಚಿತ್ತರಂಜನ್ ಬೋಳಾರ, ಚರಣ್ ಜೆ.ಶೆಟ್ಟಿ ಕುಳಾಯಿ ಗುತ್ತು, ತುಳುವೆರ್ ಕಲಾ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೇಶ್, ಕೆಮ್ರಾಲ್ ಗ್ರಾಪಂ ಕಾರ್ಯದರ್ಶಿ ಕೇಶವ್, ಗುತ್ತಿಗೆದಾರ ಜಯರಾಮ ಆಚಾರ್ಯ ಪಕ್ಷಿಕೆರೆ, ಜೈ ತುಳುನಾಡ್ ಸಂಸ್ಥೆ ಮಾಜಿ ಅಧ್ಯಕ್ಷ ಉದಯ್ ಪೂಂಜಾ ತಾಳಿಪಾಡಿ ಗುತ್ತು, ಕೃಷಿಕ ಲಕ್ಷ್ಮಣ್ ಪೂಜಾರಿ ತೋಕೂರು, ಮಂಡಳಿ ಅಧ್ಯಕ್ಷ ಧನ್‌ರಾಜ್ ಅಂಚನ್, ಮಹಿಳಾ ಮಂಡಳಿ ಅಧ್ಯಕ್ಷೆ ಧನಲಕ್ಷ್ಮೀ, ಕಾರ್ಯಕ್ರಮ ಸಂಯೋಜಕ ಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು. ಯಜ್ಞೇಶ್ ಶೆಟ್ಟಿಗಾರ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net