ಕೂಲಿ ಕಾರ್ಮಿಕನ ಮೃತದೇಹ ಕೆರೆಯಲ್ಲಿ ಪತ್ತೆ

DEAD BODY
DEAD BODY
Published on

ಕಾಸರಗೋಡು: ನಾಪತ್ತೆಯಾಗಿದ್ದ ಕೊಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಮೀಪದ ನಿವಾಸಿ ಡಿ.ಮಾಧವ್-ಲಕ್ಷ್ಮೀ ದಂಪತಿ ಪುತ್ರ, ಕೂಲಿ ಕಾರ್ಮಿಕ ವಿನಾಯಕ ಕೆ. (25) ಅವರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.

ಭಾನುವಾರ ಕೊಡ್ಲು ದೇವಳ ಪರಿಸರದ ವಾಸಗಿ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದ ವಿನಾಯಕ ವಾಪಸ್ ಬಾರದಿದ್ದಾಗ ಮನೆಯವರು ಕಾಸರಗೋಡು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆರೆ ಸಮೀಪ ಪರಿಶೀಲಿಸಿದಾಗ ಮೊಬೈಲ್, ಚಪ್ಪಲಿ ಪತ್ತೆಯಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net