ಅಪರಾಧಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ

judgement
judgement
Published on

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿ ಶಿಕ್ಷಕಗೆ ಕಾಸರಗೋಡು ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ಕೆ.ಸಂತೋಷ್ ಕುವಾರ್ ವಿವಿಧ ಸೆಕ್ಷನ್‌ಗಳಡಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಎನ್‌ಸಿಸಿ ಇನ್‌ಸ್ಪೆಕ್ಟರ್ ಹಾಗೂ ಶಿಕ್ಷಕ, ಮೈರೆ ಗ್ರಾಮದ ಬಿಸ್ಮಿಲ್ಲಾ ಮಂಜಿಲ್‌ನ ಇಬ್ರಾಹಿಂ ಎಂ.(54) ಶಿಕ್ಷೆಗೊಳಗಾದ ಅಪರಾಧಿ. ಪೋಕ್ಸೋ ಕಾಯ್ದೆ ಪ್ರಕಾರ ಆರೋಪಿಗೆ 5 ವರ್ಷ ಕಠಿಣ ಸಜೆ ಮತ್ತು 50,000 ರೂ. ದಂಡ ಹಾಗೂ ಜೆ.ಜೆ. ಕಾಯ್ದೆ ಪ್ರಕಾರ ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ.

2022, ನ.22ರಂದು ಸಂಜೆ ಶಾಲೆಯ ಎನ್‌ಸಿಸಿ ಕೊಠಡಿಯೊಳಗೆ ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ರಾಹಿಂ ಎಂ. ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net