ಹೆಬ್ರಿ: ಗೋಧಾಮದಲ್ಲಿ ಡಾ.ರಾಮಕೃಷ್ಣ ಆಚಾರ್ಯರು ಕೃಷಿಯೊಂದಿಗೆ, ಗೋವುಗಳ ಸೇವೆ ವಾಡಿ ಮನ್ನಣೆ ಪಡೆದಿದ್ದಾರೆ. ರೈತನ ಬದುಕಿನ ಬಗ್ಗೆ ವಿಶೇಷ ಗೌರವ ನೀಡಿ ರೈತ ಪೀಠ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ವಿಜ್ಞಾನ, ವೈಚಾರಿಕತೆ, ಕೃಷಿ, ಆಧುನಿಕತೆಯೊಂದಿಗೆ, ಪ್ರಾಕೃತಿಕ ಸೌಂದರ್ಯದೊಂದಿಗೆ ನಾಗಮಂಡಲ ನಡೆಯುತ್ತಿರುವುದು ಇಲ್ಲಿಯ ಹೆಮ್ಮೆ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.