ಶ್ರೀಮತಿ ರತ್ನಾವತಿ ದತ್ತಿ ಉಪನ್ಯಾಸ- ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೆ.ಸುಬ್ರಾಯ ಹೆಬ್ಬಾರ್ ಮತ್ತು ರತಿ ಎಸ್.ಹೆಬ್ಬಾರ್, ವೆರೋನಿಕಾ ಎಂ.ಅಂಚನ್, ಭಾಸ್ಕರ ಕಾಮತ್ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸತ್ಯೇಂದ್ರ ಪೈ, ಅಶೋಕ್ ಕಾಮತ್, ಸುರೇಂದ್ರ ಅಡಿಗ, ಪುಂಡಲೀಕ ಮರಾಠೆ, ದಯಾನಂದ ಪೈ, ಜಯಲಕ್ಷ್ಮೀ, ಶಂಕರ ಶ್ರೀಯಾನ್, ಗಣೇಶ್ ಕಿಣಿ ಕಟಪಾಡಿ ಇದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿ ಗುರುತಿಸುವಂತಾಗುವಲ್ಲಿ ಶತಮಾನೋತ್ತರ ಇತಿಹಾಸ ಇರುವ ಅನುದಾನಿತ ಕನ್ನಡ ಶಾಲೆಗಳ ಕೊಡುಗೆ ಅನನ್ಯ. ಪ್ರಸ್ತುತ ಸರ್ಕಾರದ ಅನುದಾನವೂ ಇಲ್ಲ. ವಿದ್ಯಾರ್ಥಿಗಳು ಇರುವ ಶಾಲೆಗಳಿಗೆ ಶಿಕ್ಷಕರನ್ನೂ ಕೊಡುತ್ತಿಲ್ಲ. ನಾವು ಅನುದಾನವನ್ನು ಕೇಳುತ್ತಿಲ್ಲ. ವಿದ್ಯಾರ್ಥಿಗಳು ಇರುವ ಶಾಲೆಗಳಿಗೆ ಕನಿಷ್ಠ ಗೌರವ ಶಿಕ್ಷಕರನ್ನಾದರೂ ಕೊಟ್ಟು ಕನ್ನಡ ಶಾಲೆ ಉಳಿಸಿ ಎಂದು ಎಸ್‌ವಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸತ್ಯಂದ್ರ ಪೈ ಆಗ್ರಹಿಸಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಶ್ರೀಮತಿ ರತ್ನಾವತಿ ದತ್ತಿ ಉಪನ್ಯಾಸ- ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಅಶೋಕ ಕಾಮತ್, ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಹಿರಿಯ ನಿವೃತ್ತ ಶಿಕ್ಷಕ ದಂಪತಿ ಕೆ.ಸುಬ್ರಾಯ ಹೆಬ್ಬಾರ್ ಮತ್ತು ರತಿ ಎಸ್.ಹೆಬ್ಬಾರ್, ವೆರೋನಿಕಾ ಎಂ.ಅಂಚನ್, ಭಾಸ್ಕರ ಕಾಮತ್ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ವಿಎಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ದಯಾನಂದ ಪೈ, ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ, ಶಂಕರ ಶ್ರೀಯಾನ್, ಗಣೇಶ್ ಕಿಣಿ ಕಟಪಾಡಿ ಉಪಸ್ಥಿತರಿದ್ದರು. ಸಂಯೋಜಕ ಎಸ್.ಎಸ್.ಪ್ರಸಾದ್ ನಿರೂಪಿಸಿದರು. ಸಹ ಸಂಯೋಜಕ ಡೋಮಿಯನ್ ಆರ್.ನೋರೋನ್ಹಾ ಪ್ರಾಸ್ತಾವಿಕ ಮಾತನಾಡಿದರು. ಮಧುಕರ್ ಎಸ್.ಕಲ್ಯಾ ವಂದಿಸಿದರು.