ವರದಿಗಳ ಸತ್ಯಾಸತ್ಯತೆ ಪರಿಶೀಲನೆ ಸವಾಲು

  ಮಾಧ್ಯಮ ಕಾರ್ಯಾಗಾರದಲ್ಲಿ ಪದ್ಮಶ್ರೀ ಬೆಳೇರಿ ಸತ್ಯನಾರಾಯಣ ಅವರನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಗೌರವಿಸಿದರು. ವಿ.ಪಳನಿಚಾಮಿ, ಕೆ.ಮನೋಜ್, ಡಾ.ಎ.ಕೆ.ಜಾಕಿರ್ ಹುಸೇನ್, ಲಕ್ಷ್ಮೀಪ್ರಿಯಾ ಎಸ್.ಎಸ್. ಮೊದಲಾದವರಿದ್ದರು.
ಮಾಧ್ಯಮ ಕಾರ್ಯಾಗಾರದಲ್ಲಿ ಪದ್ಮಶ್ರೀ ಬೆಳೇರಿ ಸತ್ಯನಾರಾಯಣ ಅವರನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಗೌರವಿಸಿದರು. ವಿ.ಪಳನಿಚಾಮಿ, ಕೆ.ಮನೋಜ್, ಡಾ.ಎ.ಕೆ.ಜಾಕಿರ್ ಹುಸೇನ್, ಲಕ್ಷ್ಮೀಪ್ರಿಯಾ ಎಸ್.ಎಸ್. ಮೊದಲಾದವರಿದ್ದರು.
Published on
ಕಾಸರಗೋಡು: ಮಾಧ್ಯಮ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅನೇಕ ಸವಾಲು ಒಡ್ಡುತ್ತಿರುವ ಮಧ್ಯೆ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸಿ ವರದಿಗಳ ಸತ್ಯಾಸತ್ಯತೆ ಪರಿಶೀಲಿಸುವಲ್ಲಿ ಪತ್ರಕರ್ತರು ಜಾಗರೂಕತೆ ಪಾಲಿಸಬೇಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅಭಿಪ್ರಾಯಪಟ್ಟರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದ ‘ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ’ (ಪಿಐಬಿ) ಕೊಚ್ಚಿ ವತಿಯಿಂದ ಕಾಸರಗೋಡಿನಲ್ಲಿ ಸ್ಥಳೀಯ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಿಐಬಿ ಕೇರಳ-ಲಕ್ಷದ್ವೀಪ ವಲಯ ಹೆಚ್ಚುವರಿ ಮಹಾನಿರ್ದೇಶಕ ವಿ.ಪಳನಿಚಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿ ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ರಂಗಕ್ಕೆ ಅನುಗುಣ ಪತ್ರಕರ್ತರು ಕೌಶಲವನ್ನು ನಿರಂತರ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಮತ್ತು ಹಿರಿಯ ಪತ್ರಕರ್ತ ಎಂ.ಒ.ವರ್ಗೀಸ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ಪಿಐಬಿ ಕೊಚ್ಚಿಯ ಸಹಾಯಕ ನಿರ್ದೇಶಕಿ ಲಕ್ಷ್ಮೀಪ್ರಿಯಾ ಎಸ್.ಎಸ್. ಐಐಎಸ್ ಮಾಹಿತಿ ನೀಡಿದರು. ಬಳಿಕ ಸಂವಾದ ನಡೆಯಿತು.

ಪಿಐಬಿ ಕೊಚ್ಚಿ ಮತ್ತು ಆಲ್ ಇಂಡಿಯಾ ರೇಡಿಯೋ ಕೊಚ್ಚಿ ನಿರ್ದೇಶಕಿ ಧನ್ಯಾ ಸನಲ್ ಇದ್ದರು. ಕಾಸರಗೋಡು ಪ್ರೆಸ್‌ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಪ್ರಧಾನ ಭಾಷಣ ಮಾಡಿದರು. ಪಿಐಬಿ ಕೊಚ್ಚಿಯ ಮಾಧ್ಯಮ ಮತ್ತು ಸಂವಹನಾಧಿಕಾರಿ ಶಮಿಲಾ ಕೆ.ವೈ. ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ವಂದಿಸಿದರು.

ಸೈಬರ್ ಜಾಗೃತಿ ತರಗತಿ

ಆಧುನಿಕ ಅಂಚೆ ಕಚೇರಿಗಳ ಕಾರ್ಯಚಟುವಟಿಕೆ ಬಗ್ಗೆ ಕೋಯಿಕ್ಕೋಡ್ ಉತ್ತರ ವಲಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ ಸಹಾಯಕ ನಿರ್ದೇಶಕ ಕೆ.ಮನೋಜ್, ಸಹಕಾರ ಸಚಿವಾಲಯದ ಜಾಗೃತಿ ಮತ್ತು ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಕುರಿತು ಕಣ್ಣೂರಿನ ಐಸಿಎಂ ನಿರ್ದೇಶಕ ಡಾ.ಎ.ಕೆ.ಜಾಕಿರ್ ಹುಸೇನ್, ಹೊಸ ಬೆದರಿಕೆಗಳು ಮತ್ತು ಸುರಕ್ಷಿತ ಕ್ರಮ ಎಂಬ ವಿಷಯದ ಬಗ್ಗೆ ಕಾಸರಗೋಡು ಸೈಬರ್ ಅಪರಾಧ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಶಿನು ಕೆ.ಬಿ. ಹಾಗೂ ‘ಎಐ-ಆಧಾರಿತ ಪತ್ರಿಕೋದ್ಯಮ-ವರದಿಗಾರಿಕೆ, ಬರವಣಿಗೆ ಮತ್ತು ಸಂಪಾದನಾ ಸಾಧನಗಳು’ ಎಂಬ ವಿಷಯದ ಕುರಿತು ಫ್ಯಾಕ್ಟ್ ಚೆಕ್ಕರ್ ಮತ್ತು ಎಐ ತರಬೇತುದಾರ ಹಬೀಬ್ ರೆಹಮಾನ್ ವೈ.ಪಿ. ತರಗತಿ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net