ತುಳುನಾಡಿನ ಸಂಸ್ಕೃತಿಯ ಪ್ರತೀಕ ಕಂಬಳ

ಬಳ್ಕುಂಜೆಯಲ್ಲಿ ಕಂಬಳವನ್ನು  ಮಧ್ವಪತಿ ಆಚಾರ್ಯ ಉದ್ಘಾಟಿಸಿಸರು. ಕಂಬಳ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ ಕೊಟ್ನಾಯ ಗುತ್ತು , ಧಾರ್ಮಿಕ ಪರಿಷ್ಯತ್ ಸಸ್ಯೆ ಮಲ್ಲಿಕಾ ಪಕ್ಕಳ, ಉದ್ಯಮಿ ಡಾ.ವಿರಾರ್ ಶಂಕರ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತಿತರರಿದ್ದರು.
ಬಳ್ಕುಂಜೆಯಲ್ಲಿ ಕಂಬಳವನ್ನು ಮಧ್ವಪತಿ ಆಚಾರ್ಯ ಉದ್ಘಾಟಿಸಿಸರು. ಕಂಬಳ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ ಕೊಟ್ನಾಯ ಗುತ್ತು , ಧಾರ್ಮಿಕ ಪರಿಷ್ಯತ್ ಸಸ್ಯೆ ಮಲ್ಲಿಕಾ ಪಕ್ಕಳ, ಉದ್ಯಮಿ ಡಾ.ವಿರಾರ್ ಶಂಕರ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಬಳ್ಕುಂಜೆಯಲ್ಲಿ ನಡೆಯುತ್ತಿರುವ ಕಂಬಳ ಬಳ್ಕುಂಜೆ ಗ್ರಾಮಕ್ಕೆ ಹಬ್ಬದ ವಾತಾವರಣ ಸೃಷ್ಟಿಸಿದೆ. ಕಂಬಳ ಆರಾಧನೆಯ ರೂಪ ಪಡೆದಿರುವುದು ಮಾತ್ರವಲ್ಲದೆ ತುಳುನಾಡಿನ ಸಂಸ್ಕೃತಿಯ ಪ್ರತೀಕ ಎಂದು ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಮಧ್ವಪತಿ ಆಚಾರ್ಯ ಹೇಳಿದರು.
ಬಳ್ಕುಂಜೆ ಕಂಬಳ ಸಮಿತಿ ವತಿಯಿಂದ ಕರಿಯ ದೇಸಿಂಗರಾಯ ಬೊಳಿಯ ದೇಸಿಂಗರಾಯ ಕಂಬಳ ಉದ್ಘಾಟಿಸಿ ಮಾತನಾಡಿದರು. ಕಂಬಳದ ಕರೆಯನ್ನು ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಬಳಕುಂಜ ಸಂತ ಪೌಲರ ದೇವಾಲಯದ ಧರ್ಮಗುರು ಪೌಲ್ ಸಿಕ್ವೇರ ಉದ್ಘಾಟಿಸಿದರು. ಕಂಬಳ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ ಕೊಟ್ನಾಯ ಗುತ್ತು ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಉದ್ಯಮಿ ಡಾ.ವಿರಾರ್ ಶಂಕರ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಗುಣಪಾಲ ಪೂಂಜ, ಪ್ರಭಾಕರ ಪೂಂಜ, ರವಿಪೂಂಜ, ಪದ್ಮಾವತಿ, ಭಗವಾನ್ ಆಳ್ವ, ಶೇಖರ ಶೆಟ್ಟಿ ಪಡುಮನೆ, ಸತೀಶ್ ಶೆಟ್ಟಿ ಬೋಳದಗುತ್ತು, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಿಲ್ಪಾಡಿ ಬಂಡಸಾಲೆ ರಂಜನ್ ಬಿ.ಶೆಟ್ಟಿ, ಬಿರುವೆರ್ ಕುಡ್ಲದ ಗೌರವಾಧ್ಯಕ್ಷ ಕಿಶೋರ್ ಸಾಲಿಯಾನ್, ಬಳಕುಂಜ ಹಯಾತುಲ್ ಇಸ್ಲಾಂ ಮದ್ರಸದ ಧರ್ಮಗುರು ಮೊಹಮ್ಮದ್ ಮುಸ್ತಾಪ, ಹಿರಿಯರಾದ ಬಿ.ಎಚ್ ಖಾಸಿಂ, ಭಾನುಮತಿ ಶೆಟ್ಟಿ ಕಕ್ವಗುತ್ತು, ರೋಷನ್ ಡಿಸೋಜ, ಡಾ.ಪ್ರೀಡಾ ರೋಡ್ರಿಗಸ್, ಕೇಸರಿ ಪಿ.ರೈ, ರಾಜೇಶ್ ಶೆಟ್ಟಿ ಪುಲೋಡಿಬೀಡು, ಕರುಣಾಕರ ಶೆಟ್ಟಿ ಉಳೆಪಾಡಿ, ಕಂಬಳ ಸಮಿತಿ ಅಧ್ಯಕ್ಷತೆ ಮಲ್ಲಿಕಾ ಶೆಟ್ಟಿ ಬಳ್ಕುಂಜೆಗುತ್ತು ಮತ್ತಿತರರು ಉಪಸ್ಥಿತರಿದ್ದರು. ದಿನಕರ ಶೆಟ್ಟಿ ಬಳ್ಕುಂಜೆ ಸ್ವಾಗತಿಸಿ, ಬಾಬಾಪ್ರಸಾದ್ ಅರಸ್ ಮತ್ತು ಶರತ್ ಶೆಟ್ಟಿ ಕಿನ್ನಿಗೋಳಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net