ಮನೆ ಅಂಗಳಕ್ಕೆ ಬಿದ್ದ ಕಾರು, ಇಬ್ಬರ ರಕ್ಷಣೆ

ಸರ್ವೆ ಗ್ರಾಮದ ಸೊರಕೆ ಎಂಬಲ್ಲಿ ಮನೆಯ ಅಂಗಳಕ್ಕೆ ಉರುಳಿಬಿದ್ದ ಕಾರು.
ಸರ್ವೆ ಗ್ರಾಮದ ಸೊರಕೆ ಎಂಬಲ್ಲಿ ಮನೆಯ ಅಂಗಳಕ್ಕೆ ಉರುಳಿಬಿದ್ದ ಕಾರು.
Published on
ಪುತ್ತೂರು ಗ್ರಾಮಾಂತರ: ಬೆಂಗಳೂರಿನಿಂದ ಖರೀದಿಸಿ ತರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮನೆಯೊಂದರ ಅಂಗಳಕ್ಕೆ ಎರಡು ಬಾರಿ ಪಲ್ಟಿಯಾಗಿ ಬಿದ್ದ ಘಟನೆ ಸರ್ವೆ ಗ್ರಾಮದ ಸೊರಕೆ ಸಮೀಪ ಸರ್ವೆ-ತಿಂಗಳಾಡಿ ರಸ್ತೆಯಲ್ಲಿ ನಡೆದಿದ್ದು, ಕಾರಿನೊಳಗೆ ಸಿಲುಕಿಕೊಂಡಿದ್ದ ಚಾಲಕ ಸಹಿತ ಇಬ್ಬರನ್ನು ಸ್ಥಳೀಯರು ಹೊರತೆಗೆದು ರಕ್ಷಿಸಿದ್ದಾರೆ.
ಹರೀಶ್ ಎಂಬುವರ ಟಿಯಾಗೊ ಕಾರನ್ನು ಬೆಂಗಳೂರಿನಿಂದ ಶರೀಫ್ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದರು. ಮಂಗಳವಾರ ನಸುಕಿನ ವೇಳೆ ಸರ್ವೆ ಗ್ರಾಮದ ಸೊರಕೆ ತಿರುವು ರಸ್ತೆ ಭಾಗದಲ್ಲಿ ನಿದ್ರೆ ಮಂಪರಿನಲ್ಲಿದ್ದ ಚಾಲಕನ ಹತೋಟಿ ಕಳೆದುಕೊಂಡ ಕಾರು ರಸ್ತೆಯಿಂದ ಸುಮಾರು 12 ಅಡಿ ಆಳದಲ್ಲಿರುವ ಸದಾನಂದ ಸೊರಕೆ ಎಂಬುವರ ಮನೆಯ ಅಂಗಳಕ್ಕೆ ಎರಡು ಪಲ್ಟಿಯಾಗಿ ಬಿದ್ದಿದೆ.
ಶಬ್ದ ಕೇಳಿ ಎಚ್ಚರಗೊಂಡ ಸದಾನಂದ ಸೊರಕೆ ಮತ್ತಿತರರು ಸೇರಿ ಸಂಪೂರ್ಣ ನಜ್ಜುಗಜ್ಜಾದ ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕ ಶರೀಫ್ ಮತ್ತು ಜತೆಗಿದ್ದ ಉಮ್ಮರ್ ಎಂಬುವರನ್ನು ಹರಸಾಹಸದಿಂದ ಹೊರಗೆ ತೆಗೆದು ರಕ್ಷಿಸಿದ್ದಾರೆ. ಇಬ್ಬರೂ ಹೆಚ್ಚಿನ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಸದಾನಂದ ಸೊರಕೆ ಅವರ ಮನೆಯ ಬದಿಯಲ್ಲಿದ್ದ ಸಿಮೆಂಟ್ ಶೀಟ್‌ಗಳಿಗೆ ಹಾನಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net