ತಾಯ್ನಡಿಗೆ ಬಂದ ಸಾಂಜೋ ಸುನೀಲ್ ಮೃತದೇಹ

ಸಾಂಜೋ ಸುನೀಲ್
ಸಾಂಜೋ ಸುನೀಲ್
Published on
ಕಡಬ: ಐರ್ಲೆಂಡ್‌ನಲ್ಲಿ ಫೆ.19ರಂದು ಮೃತಪಟ್ಟಿದ್ದ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನೀಲ್ (31) ಅವರ ಪಾರ್ಥಿವ ಶರೀರವನ್ನು ಶನಿವಾರ ಹುಟ್ಟೂರಿಗೆ ತರಲಾಯಿತು.
ಪಾರ್ಥಿವ ಶರೀರ ವಿಮಾನದ ಮೂಲಕ ಶನಿವಾರ ಮುಂಜಾನೆ ಬೆಂಗಳೂರು ತಲುಪಿದ್ದು, ಬಳಿಕ ಕುಟುಂಬಸ್ಥರು ಬೆಂಗಳೂರಿನಿಂದ ಆಂಬುಲೆನ್ಸ್‌ನಲ್ಲಿ ಮನೆಗೆ ತಂದಿದ್ದಾರೆ. ಭಾನುವಾರ ಮಧ್ಯಾಹ್ನ ವಿಮಲಗಿರಿ ಸೇಂಟ್ ಮೇರಿಸ್ ಮಲಂಕರ ಕೆಥೋಲಿಕ್ ಚರ್ಚ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಐರ್ಲೆಂಡ್‌ನ ಡಬ್ಲಿನ್ ನಗರದ ಕೆಥೋಲಿಕ್ ಚಾಪೆಲ್‌ನಲ್ಲಿ ಮಾ.4ರಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮನೆಯಲ್ಲಿ ಶವವಾಗಿ ಪತ್ತೆ

ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದಲ್ಲಿ ವಾಸವಾಗಿದ್ದ ಸಾಂಜೋ ಸುನೀಲ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಐರಿಶ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಆತ್ಮಹತ್ಯೆ ಇರಬಹುದು ಎಂದು ಶಂಕಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಐರ್ಲೆಂಡ್‌ನಲ್ಲಿ ನರ್ಸ್ ಆಗಿರುವ ಲಿಷ್ಮಾ ಫಿಲಿಫ್ ಅವರೊಂದಿಗೆ ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಇಸ್ರೆಲ್‌ನಲ್ಲಿ ಉದ್ಯೋಗದಲ್ಲಿದ್ದ ಸಾಂಜೋ ಸುನೀಲ್ ಮದುವೆ ಬಳಿಕ ಅಲ್ಲಿ ಕೆಲಸ ತೊರೆದು ತಿಂಗಳ ಹಿಂದೆಯಷ್ಟೇ ಐರ್ಲೆಂಡ್‌ಗೆ ಬಂದಿದ್ದರು. ಮೃತರು ಪತ್ನಿ, ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net