ಹೆತ್ತವರನ್ನು ಉತ್ತಮವಾಗಿ ನೋಡುವುದೇ ಮನಸ್ಸಿನ ಸೌಂದರ್ಯ

 ಬೊಲ್ಲೆಟ್ಟು ಆದಿ ಆಲಡೆ ಜೀರ್ಣೋದ್ಧಾರಕ್ಕೆ ಅದವಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಿಶೋರ್ ಆಳ್ವ, ವೈ.ಪ್ರಪುಲ್ಲ ಶೆಟ್ಟಿ, ಪ್ರದೀಪ್ ಕುವಾರ್ ವಸುಂದರ ಶೆಟ್ಟಿ, ಯುವರಾಜ ಶೆಟ್ಟಿ, ಉದಯ ಹೆಗ್ಡೆ, ಸೀತಾರಾಮ ಶೆಟ್ಟಿ ಮತ್ತಿತರರಿದ್ದರು.
ಬೊಲ್ಲೆಟ್ಟು ಆದಿ ಆಲಡೆ ಜೀರ್ಣೋದ್ಧಾರಕ್ಕೆ ಅದವಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಿಶೋರ್ ಆಳ್ವ, ವೈ.ಪ್ರಪುಲ್ಲ ಶೆಟ್ಟಿ, ಪ್ರದೀಪ್ ಕುವಾರ್ ವಸುಂದರ ಶೆಟ್ಟಿ, ಯುವರಾಜ ಶೆಟ್ಟಿ, ಉದಯ ಹೆಗ್ಡೆ, ಸೀತಾರಾಮ ಶೆಟ್ಟಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬಾಹ್ಯ ಸೌಂದರ್ಯವಂತರಾಗಿದ್ದರೆ ಸಾಲದು, ಒಳಗಿನ ಮನಸ್ಸು ಸುಂದರವಾಗಿರಬೇಕು. ಜನ್ಮ ಕೊಟ್ಟ ತಂದೆ-ತಾಯಿಯನ್ನು ಉತ್ತಮವಾಗಿ ನೋಡುವುದೇ ಮನಸ್ಸಿನ ಸೌಂದರ್ಯವಾಗಿದೆ ಎಂದು ಅದವಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಬೊಲ್ಲೆಟ್ಟು ಆದಿ ಆಲಡೆ ಜೀರ್ಣೋದ್ಧಾರಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ, ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ವಕೀಲ ಪ್ರದೀಪ್ ಕುವಾರ್, ಕುವಾರ ಪಾತ್ರಿ ಅಶೋಕ್ ವಾತನಾಡಿದರು. ತಂತ್ರಿಗಳಾದ ಸಜೆ ಹರೀಶ ಜೋಯಿಸ ಹಾಗೂ ಪ್ರಧಾನ ಅರ್ಚಕ ಗಣೇಶ್ ಬಿ.ಭಟ್ ನೇತೃತ್ವದಲ್ಲಿ ಶಿಲಾನ್ಯಾಸದ ಧಾರ್ಮಿಕ ವಿಧಿಗಳು ಸಂಪನ್ನಗೊಂಡಿತು.
ಕುತ್ಯಾರ್ ಅರಮನೆ ಜಿನೇಶ್ ಬಲ್ಲಾಳ್, ವೈ.ಪ್ರಪುಲ್ಲ ಶೆಟ್ಟಿ ಎಲ್ಲೂರುಗುತ್ತು, ಆಡಳಿತ ಸಮಿತಿ ಅಧ್ಯಕ್ಷ ಯುವರಾಜ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಇಂಜಿನಿಯರ್ ಭಗವಾನ್‌ದಾಸ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ವಸುಂದರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು ಸ್ವಾಗತಿಸಿದರು. ಉದಯ ಹೆಗ್ಡೆ ದಾರೋಡುಗುತ್ತು ವಂದಿಸಿದರು. ರಾಕೇಶ್ ಕುಂಜೂರು ನಿರೂಪಿಸಿದರು.

ನಮಗೆ ಸಂಬಂಧಪಟ್ಟ ಹಬ್ಬಗಳ ಆಚರಣೆಗೆ ಯಾವುದೇ ಸಂದರ್ಭ ಬಂದಾಗ ದೇವರು ತೊಂದರೆಗಳಾಗದಂತೆ ನೋಡಿಕೊಳ್ಳತ್ತಾನೆ. ಇದೇ ಭಾರತದ ನೆಲದ ವೈಶಿಷ್ಟೃ. ಸಮಸ್ಯೆ ಬಂದಾಗ ವಾತ್ರ ದೈವ ದೇವರನ್ನು ನೆನೆಯುವ ನಮಗೆ ಎಚ್ಚರಿಸುವಂತಹ ಕೆಲಸ ದೇವರಿಂದಾಗುತ್ತಿದೆ. ತಾಯಿಯಂತೆ ಮಕ್ಕಳನ್ನು ಪೊರೆಯುವ ದೇವರಿಗೆ ಮಕ್ಕಳನ್ನು ಯಾವಾಗಲೂ ನೋಡುವ ಆಸೆ ಇದ್ದು, ಹಗೆತನವಿಲ್ಲದೆ ಪ್ರೀತಿಯಿಂದ ಕಷ್ಟ, ಕೀಟಲೆ ಕೊಟ್ಟು ತನ್ನೆಡೆಗೆ ಬರವಾಡಿಕೊಳ್ಳುವ ಶಕ್ತಿ ದೇವರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net