ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ) ಮತ್ತು ಜಿಲ್ಲಾಡಳಿತ, ಕಾಸರಗೋಡು ಪೆಡಲರ್ಸ್ ಸೈಕ್ಲಿಂಗ್ ಕ್ಲಬ್ ಮೇ 31ರಂದು ‘ಕಾಸರಗೋಡು ಫೋರ್ಟ್ ರೈಡ್-2026’ ಬೈಸಿಕಲ್ ರೈಡ್ ಆಯೋಜಿದೆ. ಬೆಳಗ್ಗೆ 6ಕ್ಕೆ ಹೊಸದುರ್ಗ ಕೋಟೆಯಿಂದ ಆರಂಭವಾಗುವ ಸೈಕಲ್ ಸವಾರಿ 70 ಕಿ.ಮೀ. ಕ್ರಮಿಸಿ ಕುಂಬಳೆಯ ಅರಿಕ್ಕಾಡಿ ಕೋಟೆಯಲ್ಲಿ ಕೊನೆಗೊಳ್ಳಲಿದೆ. ಕಾಸರಗೋಡಿನ ಐತಿಹಾಸಿಕ ಪರಂಪರೆಯ ಸಂಕೇತಗಳಾದ ಹೊಸದುರ್ಗ ಕೋಟೆ, ಬೇಕಲ ಕೋಟೆ, ಚಂದ್ರಗಿರಿ ಕೋಟೆ, ಪೊವ್ವಲ್ ಕೋಟೆ ಮತ್ತು ಅರಿಕ್ಕಾಡಿ ಕೋಟೆಗಳನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವುದಕ್ಕಾಗಿ ಸೈಕಲ್ ರೈಡ್ ಆಯೋಜಿಸಲಾಗಿದೆ. ರೈಡ್‌ನಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ಭಾಗವಹಿಸುವವರು ಸೈಕಲ್‌ನ್ನು ತಾವೇ ತರಬೇಕು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು.