ಯಕ್ಷಗಾನ ಸಂಸ್ಕಾರ ನೀಡುವ ಕಲೆ

ಹಿರಿಯಡಕದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ನಾಲ್ಕು ಶಾಲೆಗಳ ‘ಕಿಶೋರ ಯಕ್ಷಗಾನ’ ಋಪ್ರದರ್ಶನ ನಡೆಯಿತು.
ಹಿರಿಯಡಕದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ನಾಲ್ಕು ಶಾಲೆಗಳ ‘ಕಿಶೋರ ಯಕ್ಷಗಾನ’ ಋಪ್ರದರ್ಶನ ನಡೆಯಿತು.
Published on
ಹೆಬ್ರಿ: ಯಕ್ಷಗಾನ ನಮ್ಮ ಹಿರಿಯರು ನಮಗೆ ನೀಡಿರುವ ಸವಾರ್ಂಗ ಸುಂದರ ಕಲಾಪ್ರಕಾರ. ಇದು ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ, ಪುರಾಣ ಜ್ಞಾನ, ಆತ್ಮಸ್ಥೈರ್ಯವನ್ನು ಬೆಳೆಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಕಾರವಂತರನ್ನಾಗಿ ವಾಡುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.
ಹಿರಿಯಡಕದಲ್ಲಿ ಪರ್ಯಾಯ ಪುತ್ತಿಗೆ ಮಠ, ಉಡುಪಿ ಶ್ರೀಕೃಷ್ಣ ಮಠ, ಉಡುಪಿ ಯಕ್ಷಗಾನ ಕಲಾರಂಗ, ಯಕ್ಷಗಾನ ಪ್ರದರ್ಶನ ಸಂಟನಾ ಸಮಿತಿಗಳು, ಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಸಹಕಾರದೊಂದಿಗೆ ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಕಾಪು ವಿಧಾನಸಭಾ ಕ್ಷೇತ್ರದ ನಾಲ್ಕು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ವಾತನಾಡಿದರು.
ಮಣಿಪುರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕೃಷ್ಣಾರ್ಜುನ ಕಾಳಗ, ಹಿರಿಯಡ್ಕ ಕೆಪಿಎಸ್ ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.
ಸೆಲ್ಕೋ ಸೋಲಾರ್ ಲೈಟ್‌ನ ಗುರುಪ್ರಸಾದ್, ಉದ್ಯಮಿ ಶ್ರೀನಿವಾಸ ರಾವ್, ಯಕ್ಷ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷ ಶಿಕ್ಷಣ ಟ್ರಸ್ಟ್ ಸದಸ್ಯರಾದ ವಿ.ಜಿ.ಶೆಟ್ಟಿ, ನಾರಾಯಣ ಎಂ.ಹೆಗಡೆ, ಪ್ರಾಂಶುಪಾಲ ಮಂಜುನಾಥ್ ಭಟ್, ಪ್ರಮುಖರಾದ ಪ್ರಕಾಶ್ ಪ್ರಭು, ಅಶೋಕ್ ಜೋಗಿ, ವಿಜಯ್ ಶೆಟ್ಟಿ, ಸುಬ್ರಹ್ಮಣ್ಯ ರಾವ್, ಶೇಖರ್ ದೇವಾಡಿಗ, ವಿಜೇತ್ ಕುವಾರ್, ರೂಪಾರೇಖಾ, ರವೀಂದ್ರ ಪ್ರಭು, ಮೋಹನ್ ಕಡಬ, ಜ್ಯೋತಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net