ಕೃಷಿ ಮೇಲಿನ ನಿರಾಸಕ್ತಿ ಖೇದಕರ

ಕೈತೋಟ, ತಾರಸಿ ತೋಟದ ಉಚಿತ ತರಬೇತಿ, ತರಕಾರಿ ಬೀಜ, ಸಸಿ ವಿತರಣೆ ಕಾರ್ಯಕ್ರಮ ಪೆರ್ಮನ್ನೂರು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಉದ್ಘಾಟಿಸಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಪ್ರವೀಣ್ ಕೆ. ಮತ್ತಿತರರು ಉಪಸ್ಥಿತರಿದ್ದರು.
ಕೈತೋಟ, ತಾರಸಿ ತೋಟದ ಉಚಿತ ತರಬೇತಿ, ತರಕಾರಿ ಬೀಜ, ಸಸಿ ವಿತರಣೆ ಕಾರ್ಯಕ್ರಮ ಪೆರ್ಮನ್ನೂರು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಉದ್ಘಾಟಿಸಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಪ್ರವೀಣ್ ಕೆ. ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸರ್ಕಾರಿ ಉದ್ಯೋಗಿಗಳು ನಿವೃತ್ತಿ ಬಳಿಕ ತಾರಸಿ ಕೃಷಿ, ಹೂದೋಟ, ಕೈತೋಟಗಳಲ್ಲಿ ಸಂತೃಪ್ತಿ ಕಂಡುಕೊಂಡಿದ್ದರೆ, ಈಗಿನ ಜನರು ತೋಟಗಾರಿಕೆಯ ಆಸಕ್ತಿಯನ್ನೇ ಕಳೆದುಕೊಂಡಿರುವುದು ದುರಂತ ಎಂದು ಪೆರ್ಮನ್ನೂರು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಖೇದ ವ್ಯಕ್ತಪಡಿಸಿದರು.
ಮಂಗಳೂರು ಸಿರಿ ತೋಟಗಾರಿಕಾ ಸಂಘ ಆಶ್ರಯದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಫುಡ್ ಚೈನ್ ಕ್ಯಾಂಪೇನ್, ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್, ತೊಕ್ಕೊಟ್ಟು ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ತೊಕ್ಕೊಟ್ಟು ರಿಚಲ್ ಸರ್ವೀಸಸ್, ಆಟೋ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ತೊಕ್ಕೊಟ್ಟು ಶಾಖೆ ಸಹಭಾಗಿತ್ವದಲ್ಲಿ ತೊಕ್ಕೊಟ್ಟು ಭಟ್ನಗರದ ಶಿವಾಜಿ ಸೇವಾ ಸಮಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಕೈತೋಟ, ತಾರಸಿ ತೋಟದ ಉಚಿತ ತರಬೇತಿ, ತರಕಾರಿ ಬೀಜ, ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಪ್ರವೀಣ್ ಕೆ., ಪ್ರಮೋದ್ ಸಿ.ಎಂ. ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಿಲ್ಲಾ ಸಿರಿ ತೋಟಗಾರಿಕಾ ಸಂಘ ಉಪಾಧ್ಯಕ್ಷೆ ಡಾ.ಭಾರತಿ ನಿರ್ಮಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್., ಫುಡ್ ಚೈನ್ ಕ್ಯಾಂಪೇನ್ ಸ್ಥಾಪಕ ಯತೀಶ್ ತುಕರಾಮ್, ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಯು.ಎಚ್.ಅಲ್ತಾಫ್ ಮೊದಲಾದವರು ಉಪಸ್ಥಿತರಿದ್ದರು. ಸಿರಿಲ್ ರಾಬರ್ಟ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಎಸ್.ಕುಂಪಲ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net