ಕಾರ್ಕಡ ಶಾಲೆ ವಾರ್ಷಿಕೋತ್ಸವ ‘ಚಿಣ್ಣರ ಹಬ್ಬ’ ಸಮಾರೋಪ

 ಸಾಲಿಗ್ರಾಮ ಹೊಸ ಕಾರ್ಕಡದ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಚಿಣ್ಣರ ಹಬ್ಬ ಚಿತ್ತಾರ ಸಮಾರೋಪ ಸಮಾರಂಭದಲ್ಲಿ ಮಣಿಪಾಲ ಗ್ರೂಪ್ಸ್‌ನ ರೂಪಶ್ರೀ ಮಾತನಾಡಿದರು. ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮೊದಲಾದವರಿದ್ದರು.
ಸಾಲಿಗ್ರಾಮ ಹೊಸ ಕಾರ್ಕಡದ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಚಿಣ್ಣರ ಹಬ್ಬ ಚಿತ್ತಾರ ಸಮಾರೋಪ ಸಮಾರಂಭದಲ್ಲಿ ಮಣಿಪಾಲ ಗ್ರೂಪ್ಸ್‌ನ ರೂಪಶ್ರೀ ಮಾತನಾಡಿದರು. ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮೊದಲಾದವರಿದ್ದರು.
Published on
ಕೋಟ: ಸಾಲಿಗ್ರಾಮ ಹೊಸ ಕಾರ್ಕಡದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ‘ಚಿಣ್ಣರ ಹಬ್ಬ- ಚಿತ್ತಾರ’ ಸಮಾರೋಪ ಸಮಾರಂಭ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಅಂಬಲಪಾಡಿ ಜನಾರ್ದನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಉದ್ಘಾಟಿಸಿದರು. ಮಣಿಪಾಲ ಗ್ರೂಪ್ಸ್‌ನ ಸಿಎಸ್‌ಆರ್‌ಟೀಮ್ ಲೀಡರ್ ರೂಪಶ್ರೀ ಮಾತನಾಡಿದರು. ಹಳೇ ವಿದ್ಯಾರ್ಥಿ ಹಾಗೂ ಬೆಂಗಳೂರು ಟಿಪಿಎಂಜಿ ಗ್ಲೋಬಲ್ ಸರ್ವಿಸ್‌ನ ಅಸೋಸಿಯೇಟ್ ಪಾರ್ಟನರ್  ಅನಂತ ಕುಮಾರ್ ಸ್ವಸ್ತಿ ವಾಚನಗೈದರು.
 ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಿಶ್ವೇಶ್ವರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಡುಪಿ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ, ಉಪನ್ಯಾಸಕ ಸುಜಯೀಂದ್ರ ಹಂದೆ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಸಾಮಂತ್, ಮುಖ್ಯಶಿಕ್ಷಕ ಬಿ.ಎನ್.ಸತ್ಯನಾರಾಯಣ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಗುರುರಾಜ್ ಉಪಾಧ್ಯ, ಶಾಲಾ ವಿದ್ಯಾರ್ಥಿ ನಾಯಕ ಅಭಯ್ ಕೆ. ಮೊದಲಾದವರಿದ್ದರು. ಶಾಲಾ ಸಂಚಾಲಕ ಎನ್.ಪ್ರಭಾಕರ ಕಾಮತ್ ಸ್ವಾಗತಿಸಿದರು. ಗೌರವ ಶಿಕ್ಷಕಿ ಸುಮಾ, ಐಶ್ವರ್ಯಾ ನಿರೂಪಿಸಿದರು. ಸುಧೀರ್ ಕಾಮತ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net