ಉಡುಪಿ ಧರ್ಮಪ್ರಾಂತ್ಯದ ಪ್ರಥಮ ಅಧ್ಯಕ್ಷರಾಗಿ ನಿವೃತ್ತರಾಗಿರುವ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಸಮಾಜದಲ್ಲಿರುವ ನಿರ್ಗತಿಕರ ಸೇವೆ ಮಾಡಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರ ಆಯ್ಕೆ ಮಾಡಿಕೊಂಡು ಅಲ್ಲಿ ನಿರ್ಗತಿಕರಿಗೆ ಆಶ್ರಮ ಕಟ್ಟಲು ನಿರ್ಧರಿಸಿದ್ದರು. ಕ್ಷೇತ್ರದ ರೆಕ್ಟರ್ ಸುನೀಲ್ ವೇಗಸ್ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ 2023ರ ಜೂ.13ರಂದು ಅಂದಿನ ಧರ್ಮಾಧ್ಯಕ್ಷರು ನಿರ್ಗತಿಕರ ಆಶ್ರಮಕ್ಕೆ ಶಿಲನ್ಯಾಸ ಮಾಡಿದ್ದರು. ಇದೀಗ 60 ನಿರ್ಗತಿಕರು ವಾಸ್ತವ್ಯ ಮಾಡಲು ಆಶ್ರಮ ಸಜ್ಜಾಗಿದೆ. ಅವರಿಗೆ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು, ಮೇಲ್ವಿಚಾರಣೆಯನ್ನು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರು ನಿರ್ವಹಿಸಲಿದ್ದಾರೆ.