ಆ.15ರಂದು ವೆಲಂಕಣಿ ಕ್ಷೇತ್ರ ಪ್ರತಿಷ್ಠಾಪನಾ ಮಹೋತ್ಸವ

ಉಡುಪಿ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್​ ದೇವಾಲಯ ಹಾಗೂ ವೆಲಂಕಣಿ ಆರೋಗ್ಯ ಮಾತೆ.
ಉಡುಪಿ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್​ ದೇವಾಲಯ ಹಾಗೂ ವೆಲಂಕಣಿ ಆರೋಗ್ಯ ಮಾತೆ.
Published on

ಕ್ಷೇತ್ರದ

 ರೆಕ್ಟರ್​ ಬ್ಯಾಪ್ಟಿಸ್​ ಮಿನೇಜಸ್​ ಮಾಹಿತಿ

* ಆ.6ರಿಂದ 14ರ ವರೆಗೆ ನೊವೇನಾ ಪ್ರಾರ್ಥನೆ 

ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್​ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವವು ಆಗಸ್ಟ್​ 15ರಂದು ನಡೆಯಲಿದೆ. ಮಹೋತ್ಸವದ ಪೂರ್ವಭಾವಿಯಾಗಿ ಆ.6ರಿಂದ 14ರ ವರೆಗೆ ನೊವೇನಾ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ಹಬ್ಬದ ಸಂದೇಶ 'ಆತ ಹೇಳಿದಂತೆ ಮಾಡಿ' ಎನ್ನುವುದಾಗಿದ್ದು, ಆ.6ರಂದು ಮಧ್ಯಾಹ್ನ 3:45ಕ್ಕೆ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಜೆರಾಲ್ಡ್​ ಐಸಾಕ್​ ಲೋಬೊ ಅವರು ಪುಣ್ಯಕ್ಷೇತ್ರದ ಬಾವುಟ ಹಾರಿಸುವ ಮೂಲಕ ನೊವೇನಾ ಪ್ರಾರ್ಥನೆಗೆ ಚಾಲನೆ ನೀಡಲಿದ್ದಾರೆ.

9 ದಿನಗಳ ನೊವೇನಾ ಕಾರ್ಯಕ್ರಮದಲ್ಲಿ ಯುವಜನತೆ, ಧಾರ್ಮಿಕ ವ್ಯಕ್ತಿಗಳು, ಅಶಕ್ತರು, ಕೆಸ್ತ ಕುಟುಂಬ, ವಿದೇಶದಲ್ಲಿ ನೆಲೆಸಿರುವ ಕೆಸ್ತ ವಿಶ್ವಾಸಿಗಳು, ದಾನಿಗಳು, ನೂತನ ದಂಪತಿ, ಮಕ್ಕಳು ಹಾಗೂ ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಆ.13ರಂದು ಮಧ್ಯಾಹ್ನ 2:54ಕ್ಕೆ ಆದಿಉಡುಪಿ ಜಂಕ್ಷನ್​ನಿಂದ ಚರ್ಚ್​ನ ವರೆಗೆ ವೆಲಂಕಣಿ ಮಾತೆಯ ಸ್ವರೂಪದ ಮೆರವಣಿಗೆ ನಡೆಯಲಿದ್ದು, ಶಿವಮೊಗ್ಗ ಧರ್ಮಪ್ರಾಂತ್ಯದ ವಂ.ಫ್ರಾಂಕ್ಲಿನ್​ ಡಿಸೋಜಾ ಚಾಲನೆ ನೀಡಲಿದ್ದಾರೆ.

ಆ.15ರ ಬೆಳಗ್ಗೆ 10:30ಕ್ಕೆ ಉಡುಪಿ ಧರ್ಮಪ್ರಾಂತದ ಅಧ್ಯಕ್ಷ ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ದಿವ್ಯ ಬಲಿಪೂಜೆ ನೆರೆವೇರಿಸುವರು. ಉಡುಪಿ ಧರ್ಮಪ್ರಾಂತದ ಅನೇಕ ಗುರುಗಳು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 7:30 ಹಾಗೂ ಸಂಜೆ 4 ಗಂಟೆಗೆ ಕೊಂಕಣಿ ಭಾಷೆಯಲ್ಲಿ, ಮಧ್ಯಾಹ್ನ 2 ಗಂಟೆಗೆ ಕನ್ನಡ ಹಾಗೂ ಸಂಜೆ 6ಕ್ಕೆ ಇಂಗ್ಲಿಷ್​ ಭಾಷೆಯಲ್ಲಿ ಇನ್ನಿತರ ಬಲಿಪೂಜೆ ಆಯೋಜಿಸಲಾಗಿದೆ ಎಂದು ಪುಣ್ಯಕ್ಷೇತ್ರದ ರೆಕ್ಟರ್​ ವಂ.ಬ್ಯಾಪ್ಟಿಸ್​ ಮಿನೇಜಸ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net