ಇಎಸ್​ಐ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್​ ಪ್ರಕ್ರಿಯೆ

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
Published on: 

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

* ಪತ್ರ ರವಾನಿಸಿದ ಇಎಸ್​ಐ ಡೈರೆಕ್ಟರ್​ ಜನರಲ್​

ಉಡುಪಿ: ಉಡುಪಿಯಲ್ಲಿ ಇಎಸ್​ಐ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಜವಾಬ್ದಾರಿಯನ್ನು ಎಂ/ಎಸ್​ ಬ್ರಿಡ್ಜ್​ ಆ್ಯಂಡ್​ ರೂಫ್​ ಕೋ. (ಇಂಡಿಯಾ) ಲಿಮಿಟೆಡ್​ ಸಂಸ್ಥೆಗೆ ವಹಿಸಲಾಗಿದೆ. ಟೆಂಡರ್​ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ವಿಚಾರವಾಗಿ ಕೇಂದ್ರ ಇಎಸ್​ಐಸಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಹಾನಿರ್ದೇಶಕ ಅಶೋಕಕುಮಾರ ಸಿಂಗ್​ ಅವರು ಸರ್ಕಾರದ ಪರವಾಗಿ ನನಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸ್ತಾಪಿತ 100 ಹಾಸಿಗೆಯ ಇಎಸ್​ಐ ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದು, ಬ್ರಹ್ಮಾವರದಲ್ಲಿ ಕಾಯ್ದಿರಿಸಲಾದ ಸುಮಾರು 6 ಎಕರೆ ಪ್ರದೇಶದಲ್ಲಿ ಆವರಣ ಗೋಡೆ ರಚನೆ ಪ್ರಗತಿಯಲ್ಲಿದೆ. ಟೆಂಡರ್​ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.