ಭಕ್ತರ ಸಹಕಾರದಿಂದ ದೇಗುಲ ಅಭಿವೃದ್ಧಿ

ಸಹಪರಿವಾರ ಶ್ರೀ ಜಂಗಮೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಪಂ ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿದರು. ಪ್ರಮುಖರಾದ ಶಿವರಾಮ ಬಿಯಾಳಿ, ಶೋಭಾ ಕೆ.ಪೂಜಾರಿ, ಪ್ರಸಾದ್ ಹೆಗ್ಡೆ ಮಾರಾಳಿ, ಅಶೋಕ್ ಭಟ್ ಬಾಳೆಗುಂಡಿ ಮತ್ತಿತರರಿದ್ದರು.
ಸಹಪರಿವಾರ ಶ್ರೀ ಜಂಗಮೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಪಂ ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿದರು. ಪ್ರಮುಖರಾದ ಶಿವರಾಮ ಬಿಯಾಳಿ, ಶೋಭಾ ಕೆ.ಪೂಜಾರಿ, ಪ್ರಸಾದ್ ಹೆಗ್ಡೆ ಮಾರಾಳಿ, ಅಶೋಕ್ ಭಟ್ ಬಾಳೆಗುಂಡಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಸಪರಿವಾರ ಶ್ರೀ ಜಂಗಮೇಶ್ವರ ದೇವಸ್ಥಾನ ಕುರುಹುಗಳು, ಜೀರ್ಣ ಸ್ಥಿತಿಯಲ್ಲಿದ್ದ ದೇವಸ್ಥಾನವನ್ನು ಭಕ್ತರ ಸಹಕಾರದಿಂದ ಅತಿ ಕಡಿಮೆ ಅವಧಿಯಲ್ಲಿ ಜೀರ್ಣೋದ್ಧಾರಗೊಳಿಸಿ, ಪ್ರತಿ ವರ್ಷ ಜಾತ್ರೆಯೊಂದಿಗೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ದೇವಸ್ಥಾನ ಮುಂಬರುವ ವರ್ಷದಲ್ಲಿ ಬ್ರಹ್ಮಕಲಶೋತ್ಸವ ಹೊಸ್ತಿಲಲ್ಲಿದ್ದು, ಪೂರ್ವ ತಯಾರಿ ಶೀಘ್ರದಲ್ಲಿ ನಡೆಸಲಾಗುವುದು ಎಂದು ಜಿಪಂ ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಹೇಳಿದರು.
ಸಹಪರಿವಾರ ಶ್ರೀ ಜಂಗಮೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಸ್ಥಾನ ಕಾರ್ಯಗಳಲ್ಲಿ ಭಕ್ತರು, ಸ್ವಯಂಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಒಂದು ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಜರುಗಲಿದೆ ಎಂದರು.
ನಾಲ್ಕೂರು ಜಂಗಮೇಶ್ವರ ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ಶಿವರಾಮ ಬಿಯಾಳಿ ಅಧ್ಯಕ್ಷತೆ ವಹಿಸಿದ್ದರು. ನಾಲ್ಕೂರು ಗ್ರಾಪಂ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ನೇತಾಜಿ ಸೇವಾ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಅಧ್ಯಕ್ಷ ಅಶೋಕ್ ಭಟ್ ಬಾಳೆಗುಂಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಾರಾಧಕ ಡಾ.ಬಾಲಕೃಷ್ಣ ವೈದ್ಯ ಮುದ್ದೂರು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಉದ್ಯಮಿ ಸುಧಾಕರ ಶೆಟ್ಟಿ ಮಿಯ್ಯರು, ಹಿರಿಯರಾದ ದೇವು ನಾಯ್ಕ, ಕೋಟಿ ಹಾಂಡ, ಬ್ರಹ್ಮಬೈದರ್ಕಳ ಗರಡಿ ಮಾರಾಳಿ ಅರ್ಚಕ ಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾಕರ ಆಚಾರ್ಯ ಮಾರಾಳಿ ಕಾರ್ಯಕ್ರಮ ನಿರೂಪಿಸಿದರು.

ರಥೋತ್ಸವ, ಧಾರ್ಮಿಕ ಕಾರ್ಯಕ್ರಮ

ರುದ್ರಾಭಿಷೇಕ, ನಾಗನ ಸಾನ್ನಿಧ್ಯದಲ್ಲಿ ನವಕ ಪ್ರಧಾನ ಹೋಮ, ತುಲಾಭಾರ ಸೇವೆ, ಮಹಾಪೂಜೆ, ಭಜನಾ ಕಾರ್ಯಕ್ರಮ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಚನಾ, ಗಣಪತಿ, ವನದುರ್ಗಾ ಕಲಾ ಹೋಮ, ಜಂಗಮೇಶ್ವರ ಸಾನ್ನಿಧ್ಯದಲ್ಲಿ ಪಂಚವಿಂಶತಿ ಕಲಶ, ಶತರುದ್ರಾಭಿಷೇಕ, ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಮಂಗಳಾರತಿ, ಮಹಾಅನ್ನಸಂತರ್ಪಣೆ, ವಿವಿಧ ಭಜನಾ ತಂಡದ ಮೆರವಣಿಗೆಯೊಂದಿಗೆ ದೇವರ ರಥೋತ್ಸವ, ಕಲಾಸಂಗಮ ನಾಟಕ ತಂಡದಿಂದ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ, ಹಣಬು ಸೇವೆ ನಡೆಯಿತು.

ಹಿಂದೂಸ್ತಾನದ ಅಖಂಡತೆಗೆ ಧಾರ್ಮಿಕ ಆಚರಣೆಗಳೇ ಶಕ್ತಿ. ಈ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಮುಂದಿನ ತಲೆಮಾರಿನವರಿಗೆ ಇದರ ಅರಿವು ಮೂಡಿಸಬೇಕು. ಎಲ್ಲೇ ಇದ್ದರೂ ಹೇಗೆ ಇದ್ದರೂ ನಮ್ಮ ಧರ್ಮದ ಸಂಪ್ರದಾಯಗಳನ್ನು ಮೀರಬಾರದು.

------ಫೋಟೋ------
*ಕೆಒಎನ್ ಫೆಬ್ರವರಿ 17(1)
ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಜಂಗಮೇಶ್ವರ ದೇವರನ್ನು ವಿಶೇಷವಾಗಿ ಅಲಂಕರಿಸಲಾಯಿತು.
*ಕೆಒಎನ್ ಫೆಬ್ರವರಿ 17(2)
************************
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net