

ಕುಂದಾಪುರ: ಬೀಜಾಡಿ ಗ್ರಾಮದ ಶ್ರೀ ನಂದೀಕೇಶ್ವರ ದೇವಸ್ಥಾನದ ಗಂಟೆ ಕಳವು ಮಾಡಲಾಗಿದೆ. ರಾತ್ರಿ ದೇವಸ್ಥಾನದ ಗಂಟೆ ಶಬ್ದ ಕೇಳಿದಾಗ ದೇವಳ ಸಮೀಪದ ಮನೆಯವರಾದ ಶ್ರೇಯಸ್ ಮತ್ತು ಧೀರಜ್ ಹೊರಗೆ ಬಂದು ನೋಡಿದಾಗ ದೇವಸ್ಥಾನದ ಬಳಿ ಕಾರು ನಿಂತಿತ್ತು.
ಅನುಮಾನಗೊಂಡು ಕಾರು ಬಳಿ ಹೋದಾಗ ಸಫಾದ್ ಎಂಬಾತ ಗಂಟೆ ಕಳವು ಮಾಡಿ ಓಡಿದ್ದಾನೆ. ಕಾರಿನಲ್ಲಿದ್ದ ಮುಜಾಯಿದ್ ಎಂಬಾತ ಶ್ರೇಯಸ್ ಹಾಗೂ ಧೀರಜ್ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.