ಪರೀಕ್ಷಾ ಭಯ ನಿವಾರಣೆ, ಮಾರ್ಗದರ್ಶನಕ್ಕೆ ‘ಟಿಲಿ ಮನಸ್’

ಹೆಮ್ಮಾಡಿ ಗ್ರಾಪಂ ವತಿಯಿಂದ ಮಕ್ಕಳ ವಿಶೇಷ ಗ್ರಾಮ ಸಭೆ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ಹೆಮ್ಮಾಡಿ ಗ್ರಾಪಂ ವತಿಯಿಂದ ಮಕ್ಕಳ ವಿಶೇಷ ಗ್ರಾಮ ಸಭೆ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
Published on

ಕುಂದಾಪುರ:ಮಕ್ಕಳಿಗೆಪರೀಕ್ಷಾ ಸಮಯದ ಒತ್ತಡ,ಭಯ,ಆತಂಕನಿವಾರಣೆ ಹಾಗೂ ಸೂಕ್ತ ಮಾರ್ಗದರ್ಶನಕ್ಕಾಗಿಟೆಲಿ ಮನಸ್ ಎಂಬ ಯೋಜನೆಯಿದ್ದು,ಮಕ್ಕಳುಸಹಾಯವಾಣಿಗೆ ಕರೆ ಮಾಡಿ ಉಚಿತಸಲಹೆ, ಮಾರ್ಗದರ್ಶನಪಡೆಯಬಹುದು ಎಂದು ಆರೋಗ್ಯ ಇಲಾಖೆಸಿಎಚ್‌ಒ ಹರಿಣಿ ಗೌಡ ಹೇಳಿದರು.

ಹೆಮ್ಮಾಡಿ ಗ್ರಾಮ ಪಂಚಾಯಿತಿ ವತಿಯಿಂದಪಂಚಾಯಿತಿ ಸಭಾಭವನದಲ್ಲಿ ಗುರುವಾರನಡೆದ 2025-26ನೇಸಾಲಿನ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.

ನಮ್ಮಭೂಮಿ ಸಂಸ್ಥೆಯ ನರಸಿಂಹ ಗಾಣಿಗಮಾತನಾಡಿ,ಮಕ್ಕಳುಶಿಕ್ಷಣ,ಆಟ,ಆರೋಗ್ಯ, ಶಾಲೆಗಳಲ್ಲಿಉತ್ತಮ ಸೌಲಭ್ಯ ಕೊರತೆ ಮತ್ತಿತರಸಮಸ್ಯೆಗಳಿದ್ದರೆ ಮುಕ್ತವಾಗಿಹಂಚಿಕೊಳ್ಳಲು ಮಕ್ಕಳ ಗ್ರಾಮಸಭೆಆಯೋಜಿಸಲಾಗುತ್ತಿದೆ ಎಂದರು.

ಬೀಟ್ಪೊಲೀಸ್ ಚಂದ್ರಶೇಖರ್ ಶೆಟ್ಟಿ ಮಾತನಾಡಿದರು.ಮಕ್ಕಳಪ್ರತಿನಿಧಿಗಳಾದ ಹೆವ್ಮಾಡಿಸರ್ಕಾರಿ ಹಿ.ಪ್ರಾ.ಶಾಲೆಯಸೋನಾಕ್ಷಿ,ಲಕ್ಷಿತಾ,ಪ್ರಣತಿ,ಕಟ್ಟುಶಾಲೆಯ ಸಂದೀಪ್ ವಿವಿಧ ಸಮಸ್ಯೆಗಳಕುರಿತು ಬೆಳಕು ಚೆಲ್ಲಿದರು.

ಅಂಗನವಾಡಿಗಳಮೇಲ್ವಿಚಾರಕಿ ಸುವಾ ಮಕ್ಕಳಹಕ್ಕುಗಳ ಕುರಿತು ಮಾತನಾಡಿದರು.ಗ್ರಾ.ಪಂ.ಅಧ್ಯಕ್ಷೆಶಕೀಲಾ ಅಧ್ಯಕ್ಷತೆ ವಹಿಸಿ,ಮಕ್ಕಳಅಹವಾಲುಗಳನ್ನು ಸ್ವೀಕರಿಸಿದರು.

ಕರಾಟೆಸಾಧಕಿ ಅಮೈರಾ,ನಿವೃತ್ತಅಂಗನವಾಡಿ ಶಿಕ್ಷಕಿ ಲಲಿತಾ,ಕುಡಿಯುವನೀರಿನ ನಿರ್ವಾಹಕ ಜಗನ್ನಾಥ ಬಿಲ್ಲವಅವರನ್ನು ಪಂಚಾಯಿತಿ ವತಿಯಿಂದಸನ್ಮಾನಿಸಲಾಯಿತು.

ಗ್ರಾಪಂಉಪಾಧ್ಯಕ್ಷೆ ಶೋಭಾ ಡಿ.ಕಾಂಚನ್,ಸದಸ್ಯರು,ವಿವಿಧಇಲಾಖೆಯ ಅಧಿಕಾರಿಗಳು,ಗ್ರಾಪಂಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯದರ್ಶಿಗಿರಿಜಾ ಸ್ವಾಗತಿಸಿದರು.ಪಿಡಿಒಭಾವನಾ ನಿರೂಪಿಸಿದರು.

ಮಕ್ಕಳುಸಲ್ಲಿಸಿದ ಬೇಡಿಕೆಗಳು

* ಹೆಮಾಡಿ,ಕಟ್ಟುಶಾಲೆ ಮುಂಭಾಗದಲ್ಲಿ ರಸ್ತೆಗೆವೇಗ ನಿಯಂತ್ರಕ ಅಳವಡಿಸಿ.

* ಕಟ್ಟುಶಾಲೆಯ ಶೌಚಗೃಹದ ಛಾವಣಿ ದುರಸ್ತಿಮಾಡಬೇಕು.

* ಹೆವ್ಮಾಡಿಶಾಲಾ ಕಟ್ಟಡಗಳು ಹಳೆಯದಾಗಿದ್ದು,ಕಿಟಕಿ,ಬಾಗಿಲು,ವಾಡುದುರಸ್ತಿ ಮಾಡಬೇಕು.

* ಹೆವ್ಮಾಡಿಶಾಲೆಯ ಎಲ್ಲ ತರಗತಿಗಳ ಬೋರ್ಡ್ಕಳಪೆ ಮಟ್ಟದಲ್ಲಿದ್ದು,ಉತ್ತಮಗುಣಮಟ್ಟದ ಬೋರ್ಡ್ ಅಳವಡಿಸಿ.

* ಎಲ್ಲಶಾಲೆಗಳ ಶೌಚಗೃಹ ಸ್ವಚ್ಛ ಪಡಿಸಲುಸರ್ಕಾರದಿಂದಲೇ ಸಿಬ್ಬಂದಿನೇಮಕವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net