ಅಬಕಾರಿ ಬಿಡ್​ದಾರರಿಗೆ ತಾಂತ್ರಿಕ ತರಬೇತಿ

ಉಡುಪಿಯಲ್ಲಿ ಆಯೋಜಿಸಿದ್ದ ಅಬಕಾರಿ ಸನ್ನದುಗಳ ಇ&ಹರಾಜು ಪ್ರಕ್ರಿಯೆ ನಿಮಿತ್ತ ಬಿಡ್​ದಾರರ ಕಾಯಾಗಾರವನ್ನು ಬಾಲಕೃಷ್ಣ ಸಿ.ಎಚ್​. ಉದ್ಘಾಟಿಸಿದರು. ಬಿಂದುಶ್ರೀ, ಟಿ.ಎಂ. ಶ್ರೀನಿವಾಸ್​, ಬ್ರಿಜೇಶ್​, ಸತ್ಯಸಾಯಿ, ಪ್ರಭು ಗೌಡ ಪಾಟೀಲ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಅಬಕಾರಿ ಸನ್ನದುಗಳ ಇ&ಹರಾಜು ಪ್ರಕ್ರಿಯೆ ನಿಮಿತ್ತ ಬಿಡ್​ದಾರರ ಕಾಯಾಗಾರವನ್ನು ಬಾಲಕೃಷ್ಣ ಸಿ.ಎಚ್​. ಉದ್ಘಾಟಿಸಿದರು. ಬಿಂದುಶ್ರೀ, ಟಿ.ಎಂ. ಶ್ರೀನಿವಾಸ್​, ಬ್ರಿಜೇಶ್​, ಸತ್ಯಸಾಯಿ, ಪ್ರಭು ಗೌಡ ಪಾಟೀಲ ಇದ್ದರು.
Published on

* ಇಲಾಖೆಯ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಎಚ್​. ಮಾಹಿತಿ

* ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕಾರ್ಯಾಗಾರ ಉದ್ಘಾಟನೆ

ಉಡುಪಿ: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೆ ಬಾಕಿ ಉಳಿದಿರುವ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಪಾರದರ್ಶಕತೆ ಕಾಪಾಡುವುದರೊಂದಿಗೆ ಬಿಡ್​ದಾರರಿಗೆ ತಾಂತ್ರಿಕ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಲಾಗಿದ್ದು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಂಗಳೂರು ವಿಭಾಗದ ಅಬಕಾರಿ ಇಲಾಖೆ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಎಚ್​. ಹೇಳಿದರು.
ಐದು ವರ್ಷದ ಮದ್ಯದ ಸನ್ನದು ಪಡೆಯಲು ಸಂಭಾವ್ಯ ಬಿಡ್​ದಾರರಿಗಾಗಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಬಕಾರಿ ಇಲಾಖೆ ವತಿಯಿಂದ ಮಂಗಳವಾರ (ಜ.6) ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಾಕಿ 569 ಸನ್ನದು ಹರಾಜು

ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವಂತೆ ಹೆಚ್ಚುವರಿ ಸಂಪನ್ಮೂಲ ಕ್ರೋಡಿಕರಿಸುವ ನಿಮಿತ್ತ ರಾಜ್ಯಾದ್ಯಂತ ಬಾಕಿ ಇರುವ ಒಟ್ಟು 569 ಸನ್ನದು ಇ-ಹರಾಜು ಮಾಡಿ ಸಂಭಾವ್ಯ ಬಿಡ್​ದಾರರಿಗೆ ನೀಡಲು ನಿರ್ಧರಿಸಲಾಗಿದೆ. ಇಲಾಖೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಿಎಲ್​-2ಎ ಮತ್ತು ಸಿಎಲ್​-9ಎ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೆ ಬಾಕಿ ಇರುವ ಸನ್ನದುಗಳನ್ನು -ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಎಂಎಸ್​ಟಿಸಿ ಲಿಮಿಟೆಡ್​ನ ಪೋರ್ಟಲ್​ನಲ್ಲಿ ಇ-ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದರು.

ಜಿಲ್ಲೆಗಳಿಗೆ ಸನ್ನದು ಹಂಚಿಕೆ

ಉಡುಪಿ ಜಿಲ್ಲೆಯಲ್ಲಿ 8 ಸಿಎಲ್​-2ಎ ಸನ್ನದುಗಳನ್ನು ಸಾಮಾನ್ಯ ವರ್ಗಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎಲ್​-9ಎ ನ 1 ಹಾಗೂ ಸಿಎಲ್​-2ಎ ನ 29 ಸೇರಿದಂತೆ ಒಟ್ಟು 30 ಸನ್ನದುಗಳನ್ನು ಸಾಮಾನ್ಯ ಹಾಗೂ ಎಸ್​ಸಿ, ಎಸ್​,ಟಿ ವರ್ಗಕ್ಕೆ ಹಂಚಿಕೆ ಮಾಡಲಾಗಿದೆ. 21 ವರ್ಷ ಮೇಲ್ಪಟ್ಟ ಕರ್ನಾಟಕದ ನಿವಾಸಿಗಳುಹಾಗೂ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದ ನೋಂದಣಿಯಾದ ಬಿಡ್​ದಾರರು, ಪಾಲುದಾರಿಕೆ ಸಂಸ್ಥೆಗಳು, ಕಂಪನಿಗಳು, ಟ್ರಸ್ಟ್​ ಹಾಗೂ ಸೊಸೈಟಿಗಳು ಹರಾಜಿನಲ್ಲಿ ಭಾಗವಹಿಸಬಹುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಮಾತನಾಡಿ, ಇ-ಹರಾಜು ಕುರಿತು ವಿಸತ ಮಾಹಿತಿ ನೀಡಿದರು. ಉಡುಪಿಯ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್​, ಎಂಎಸ್​ಟಿಸಿ ಲಿ.ನ ಬ್ರಿಜೇಶ್​ ಹಾಗೂ ಸತ್ಯಸಾಯಿ, ಅಬಕಾರಿ ಅಧೀಕ್ಷಕರು, ಇಲಾಖೆಯ ಅಧಿಕಾರಿಗಳು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಬಿಡ್​ದಾರರು ಉಪಸ್ಥಿತರಿದ್ದರು.
ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಪ್ರಭು ಗೌಡ ಪಾಟೀಲ ಸ್ವಾಗತಿಸಿದರು. ಮಂಗಳೂರು ಅಬಕಾರಿ ಉಪ ನಿರೀಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
"

ಬಿಡ್​ದಾರರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಯಾವುದೇ ಭಾಗದಲ್ಲಿಯೂ ಸಹ ಇ&ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಜ.13ರಿಂದ 20ರ ವರೆಗೆ ನೇರ ಹರಾಜು ನಡೆಯಲಿದೆ. ಉಡುಪಿಯಲ್ಲಿ ಜ.20ರಂದು ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯವರೆಗೆ ಹರಾಜು ನಡೆಯಲಿದೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net