ಕಿರಿಯರ ವಿಭಾಗದ ವಿಜೇತರಲ್ಲಿ ಪ್ರಥಮ- ದೇವಿಕಾ ಕೆ.10ನೇ ತರಗತಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ. ದ್ವಿತೀಯ- ಪ್ರಣಮ್ಯ ಕೆ.ಎಸ್. 6ನೇ ತರಗತಿ ಸರಕಾರಿ ಹಿ.ಪ್ರಾ.ಶಾಲೆ ಮೊಗ್ರಾಲ್ ಪುತ್ತೂರು. ತೃತೀಯ-ಅಪೂರ್ವ ರಾವ್ ಕರಿಂಗಾಣ, 9ನೇ ತರಗತಿ ಎಸ್‌ವಿಎಎಸ್ ಟೆಂಪಲ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ. ಹಿರಿಯರ ವಿಭಾಗ: ಪ್ರಥಮ-ಭಾವನಾ ನಾಯಕ್ ದ್ವಿತೀಯ ಪಿಯುಸಿ, ಈಶ್ವರಾನಂದ ಭಾರತಿ ಸ್ವಾಮಿ ಹೈಯರ್ ಸೆಕೆಂಡರಿ ಶಾಲೆ ಎಡನೀರು. ದ್ವಿತೀಯ- ಮಾನಸ ನಾಡಿಗ್, ಬಿಎ ಮೂರನೇ ವರ್ಷ (ಸಂಸ್ಕೃತ), ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರ, ಶೃಂಗೇರಿ, ತೃತೀಯ- ಪೂಜಾ ವಾಸುದೇವ ಐಲ ವಿಶ್ವವಿದ್ಯಾನಿಲಯ ಕಾಲೇಜ್ ಮಂಗಳೂರು. ಹಿರಿಯ ಕಿರಿಯ ವಿಭಾಗದ ಒಟ್ಟು ಐದು ಮಂದಿ ವಿಜೇತರು ಕುಂಬ್ಳೆ ಕೀರ್ತನ ಕುಟೀರದ ಹರಿಕಥಾ ಶಿಕ್ಷಣಾರ್ಥಿಗಳಾಗಿದ್ದಾರೆ. ತೀರ್ಪುಗಾರರಾಗಿ ಮಂಗಳಾ ಟಿ.ಎಸ್, ಮನೋಹರ ರಾವ್, ಶೇಣಿ ಮುರಳಿ, ಮಂಗಲದಾಸ್ ಗುಲ್ವಾಡಿ, ಮಂಜುಳಾ ರಾವ್ ಇರಾ, ಚಂದ್ರಕಾಂತ ಭಟ್ ಇದ್ದರು.