ಹೆಬ್ರಿ: ಮಾದಕ ವ್ಯಸನ, ಮೊಬೈಲ್ ದುರ್ಬಳಕೆ, ರಸ್ತೆ ಸುರಕ್ಷತೆ ಬಗ್ಗೆ ಎಚ್ಚರವಹಿಸಿಬೇಕು. ಕ್ರೀಡೆ, ಸ್ಪರ್ಧಾತ್ಮಕ ಪರೀಕ್ಷೆ, ತಂತ್ರಜ್ಞಾನದ ಬಳಕೆ, ಸಮುದಾಯದ ಸೇವೆಯತ್ತ ಮಕ್ಕಳನ್ನು ಪ್ರೋತ್ಸಾಹಿಸಿ ಎಂದು ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಜಿ. ಸುಧಾಕರ್ ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘ ಸಭೆಯಲ್ಲಿ ಮಾತನಾಡಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ವಿದ್ಯಾದರ ಹೆಗ್ಡೆ ಮಾತನಾಡಿ, ಕಾಲೇಜಿನಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಸಾಧನೆ ವಾಡಬೇಕು. ಏಳಿಗೆಗಾಗಿ ಪಾಲಕರು ಕಾಲೇಜಿನೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಕರೆ ನೀಡಿದರು.
ಶಿಕ್ಷಕ ರಕ್ಷಕ ಸಂದ ಅಧ್ಯಕ್ಷೆ ಸುಮನ ಮಾತನಾಡಿದರು. ಶಿಕ್ಷಕ ರಕ್ಷಕ ಸಂದ ಅಧ್ಯಕ್ಷರಾಗಿ ಸುನೀತಾ, ಕಾರ್ಯದರ್ಶಿ ಶಿವಕುವಾರ, ಸದಸ್ಯರಾಗಿ ಉದಯ, ಶೋಭಾ, ಮಂಜುಳಾ ಆಯ್ಕೆಯಾದರು.
ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಗಣೇಶ ಎಸ್., ವಿದ್ಯಾರ್ಥಿ ವೇದಿಕೆ ಸಂಚಾಲಕಿ ಸುಷ್ಮಾ ರಾವ್, ಪ್ರಾಧ್ಯಾಪಕರು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂ ಸಂಚಾಲಕ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಅಪೂರ್ವ ನಿರೂಪಿಸಿ, ವಂದಿಸಿದರು.