ಮುಡಿಪುವಿನಲ್ಲಿ ತಾಲೂಕುಮಟ್ಟದ ಆಸ್ಪತ್ರೆ

ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಆರೋಗ್ಯ ಕಾರ್ಡ್ ವಿತರಿಸಿದರು. ಯೇನೆಪೋಯ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞ, ತಾಲೂಕು ವೈದ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನಿತಾ ಮತ್ತಿತರರು ಉಪಸ್ಥಿತರಿದ್ದರು.
ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಆರೋಗ್ಯ ಕಾರ್ಡ್ ವಿತರಿಸಿದರು. ಯೇನೆಪೋಯ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞ, ತಾಲೂಕು ವೈದ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನಿತಾ ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ವಿವಿಧ ರೀತಿಯ ಸೇವೆ ನೀಡುತ್ತಿದ್ದರೂ ಕಾರ್ಡ್ ಮೂಲಕ ಶೇ.90 ಉಚಿತ ಸೇವೆ ನೀಡುತ್ತಿರುವ ಏಕೈಕ ಸಂಸ್ಥೆ ಯೇನೆಪೋಯ ಆಸ್ಪತ್ರೆ. ಆರೋಗ್ಯ ನಮ್ಮ ಕೈಯಲ್ಲೇ ಇದ್ದು, ಆಹಾರ ಶೈಲಿಯ ಮೂಲಕ ರೋಗ ನಿಯಂತ್ರಣ ಸಾಧ್ಯ. ತಾಲೂಕುಮಟ್ಟದ ಆಸ್ಪತ್ರೆ ಮುಡಿಪುವಿನಲ್ಲೇ ನಿರ್ಮಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.
ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಯೇನೆಪೋಯ ಆರೋಗ್ಯ ಕಾರ್ಡ್, ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೇನೆಪೋಯ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞ, ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ರೀದ್, ತಾಲೂಕು ವೈದ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುನಿತಾ, ಯೇನೆಪೋಯ ವೈದ್ಯಕೀಯ ಕಾಲೇಜು ಉಪಪ್ರಾಂಶುಪಾಲ ಅಭಯ ನಿರ್ಗುಡೆ, ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹ್ಮಾನ್, ಹೊರಪ್ರಚಾರ ವಿಭಾಗ ನಿರ್ದೇಶಕ ಡಾ.ಲತೀಶ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಮೈಸೂರಿನ ಉದ್ಯಮಿ ಶಿವಕುಮಾರ್ ಬಿ., ಪಾವೂರು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಪಿಡಿಒ ಶ್ರೀಕಾಂತ್ ಸಿಂಪಿಗೇರ, ಮುಖ್ಯ ಶಿಕ್ಷಕಿ ಶರ್ಮಿಳಾ, ನಿಕಟಪೂರ್ವ ಮುಖ್ಯ ಶಿಕ್ಷಕ ಗಂಗಾದರಪ್ಪ ಮೊದಲಾದವರು ಉಪಸ್ಥಿತರಿದ್ದರು. ಗ್ರಾಪಂ ಮಾಜಿ ಸದಸ್ಯ ವಿವೇಕ್ ರೈ ಸ್ವಾಗತಿಸಿದರು. ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆರೋಗ್ಯ ಮಾನವನ ಅತಿ ದೊಡ್ಡ ಸಂಪತ್ತು. ಉತ್ತಮ ಆರೋಗ್ಯ ಇಲ್ಲದ ಕುಟುಂಬ ಅಭಿವೃದ್ಧಿ ಹೊಂದಲು ಅಸಾಧ್ಯ. ಆರೋಗ್ಯವಂತ ಸುಂದರ ಸಮಾಜ ನಿರ್ಮಾಣದ ಗುರಿ ಹೊಂದಿರುವ ಯೇನೆಪೋಯ ಆಸ್ಪತ್ರೆ ಗ್ರಾಮೀಣ ಭಾಗದ ಜನರಿಗೆ ವಿತರಿಸುತ್ತಿರುವುದು ಕೇವಲ ಒಂದು ಕಾರ್ಡ್ ಮಾತ್ರವಲ್ಲ, ಆರೋಗ್ಯದ ಭದ್ರತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net