ಪಠ್ಯೇತರ ಚಟುವಟಿಕೆಯಿಂದ ಪ್ರತಿಭೆ ವಿಕಸನ

ಉಡುಪಿ ಪೂರ್ಣಪ್ರಜ್ಞ ಪ.ಪೂ. ವಿದ್ಯಾರ್ಥಿ ಸಂಘದ ದಿನ ಹಾಗೂ ಪ್ರತಿಭಾ ದಿನಾಚರಣೆ ನಡೆಯಿತು. ಪ್ರೊ.ಸುರೇಂದ್ರನಾಥ ಶೆಟ್ಟಿ, ಡಾ. ಶ್ರೀರಮಣ ಐತಾಳ್​, ಸಂತೋಷ್​ ಕುಮಾರ್​, ಹೆಲ್ವಿನ್​ ಫೆರ್ನಾಂಡಿಸ್​, ಸುಧಾ ಕೆ., ವೈಷ್ಣವಿ ಆಚಾರ್ಯ ಇದ್ದರು.
ಉಡುಪಿ ಪೂರ್ಣಪ್ರಜ್ಞ ಪ.ಪೂ. ವಿದ್ಯಾರ್ಥಿ ಸಂಘದ ದಿನ ಹಾಗೂ ಪ್ರತಿಭಾ ದಿನಾಚರಣೆ ನಡೆಯಿತು. ಪ್ರೊ.ಸುರೇಂದ್ರನಾಥ ಶೆಟ್ಟಿ, ಡಾ. ಶ್ರೀರಮಣ ಐತಾಳ್​, ಸಂತೋಷ್​ ಕುಮಾರ್​, ಹೆಲ್ವಿನ್​ ಫೆರ್ನಾಂಡಿಸ್​, ಸುಧಾ ಕೆ., ವೈಷ್ಣವಿ ಆಚಾರ್ಯ ಇದ್ದರು.
Published on

* ಪ್ರೊ.ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ ಅಭಿಪ್ರಾಯ 

* ವಿದ್ಯಾರ್ಥಿ ಸಂಘದ ದಿನ, ಪ್ರತಿಭಾ ದಿನಾಚರಣೆ

ಉಡುಪಿ: ಪ್ರತಿಭೆಯೊಂದರಲ್ಲೂ ಸೃಜನಶೀಲತೆ ಬೆರೆತಿರುತ್ತದೆ. ಅದು ಬೆಳಗಲು ನಾಲ್ಕು ಗೋಡೆಗಳ ಮಧ್ಯದ ಶಿಕ್ಷಣ ಮಾತ್ರ ಸಾಲದು. ಅದಕ್ಕಾಗಿ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಬೇಕು. ಅಧ್ಯಯನಕ್ಕೆ ಪೂರಕ ಚಟುವಟಿಕೆಗಳಿಂದ ಚಿನ್ನಕ್ಕೆ ಪರಿಮಳ ಬಂದಂತೆ ಪ್ರತಿಭೆ ವಿಕಸನವಾಗುತ್ತದೆ ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ ಅಭಿಪ್ರಾಯಪಟ್ಟರು.
ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ದಿನ ಹಾಗೂ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರಿ ಸಾಧನೆಗೆ ಯತ್ನಿಸಿ

ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಶ್ರೀರಮಣ ಐತಾಳ್​ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು. ಸಕಾರಾತ್ಮಕ ಬದಲಾವಣೆಯಿಂದ ಪ್ರಗತಿ ಸಾಧ್ಯ. ನಿಮ್ಮ ಗುರಿಯನ್ನು ಮರು ವ್ಯಾಖ್ಯಾನಿಸಿ ಅದನ್ನು ಸಾಧಿಸಲು ಯತ್ನಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಸಂತೋಷ್​ ಕುಮಾರ್​, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಉಪನ್ಯಾಸಕ ಹೆಲ್ವಿನ್​ ಫೆರ್ನಾಂಡಿಸ್​, ಉಪನ್ಯಾಸಕಿ ಸುಧಾ ಕೆ., ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದೀಪ್ತಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ವರದಿ ಹಾಗೂ ಕ್ರೀಡಾ ಕಾರ್ಯದರ್ಶಿ ನಿಧಿ ಶೆಟ್ಟಿ ಕ್ರೀಡಾ ವರದಿ ವಾಚಿಸಿದರು. ಸಾಂಸಂತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ರಾಜ್ಯಮಟ್ಟದಲ್ಲಿ ಶೈಕ್ಷಣಿಕ ಸಾಧನೆ ಮಾಡಿದವರು, ಸಿಎ, ಸಿಎಸ್​, ಸಿಎಂಎ ಫೌಂಡೇಷನ್​ನಲ್ಲಿ ಉತ್ತೀರ್ಣರಾದವರನ್ನು ಸನ್ಮಾನಿಸಲಾಯಿತು. 2025-26ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ 2024-25ನೇ ಸಾಲಿನಲ್ಲಿ ಪದವಿ ಪೂರ್ವ ಅಂತಿಮ ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವೈಷ್ಣವಿ ಆಚಾರ್ಯ ಸ್ವಾಗತಿಸಿದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಸಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಡಿಯೋನ್​ ಹೇಡ್ರಿಯಲ್​ ಸೋನ್ಸ್​ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
"

ಅನುಕರಣೆಯ ಬದಲು ಸ್ವಂತಿಕೆ ಬೆಳೆಸಿಕೊಳ್ಳಬೇಕು. ಸಾಮಾನ್ಯ ಜ್ಞಾನವು ಆರನೇ ಇಂದ್ರಿಯವಿದ್ದಂತೆ. ಶಿಕ್ಷಣದ ಅಂತಿಮ ಗುರಿ ನಮ್ಮ ಒಳಗಣ್ಣನ್ನು ತೆರೆಸಿ, ಬೆಳಕಿನೆಡೆಗೆ ಸಾಗುವುದಾಗಿದೆ. ಒತ್ತಡದಿಂದ ಕಲಿಕೆ ಕುಂಟುತ್ತದೆ. ಇಂದಿನ ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ಬದುಕಿನ ಸವಾಲು ಎದುರಿಸಲು ಅಂಕಗಳೊಂದೇ ಸಾಲದು. ವ್ಯಕ್ತಿತ್ವದ ಪರಿಪೂರ್ಣತೆಗೆ ಪಠ್ಯೇತರ ಚಟುವಟಿಕೆ ಪ್ರಮುಖವಾಗಿದ್ದು, ಅಂತಹ ಪರಿಪೂರ್ಣ ಶಿಕ್ಷಣ ನೀಡುವಲ್ಲಿ ಪೂರ್ಣಪ್ರಜ್ಞ ಕಾಲೇಜು ಮೇಲ್ಪಂಕ್ತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net