ಉನ್ನತ ಹುದ್ದೆಗೇರಿದರೂ ಊರು, ಹೆತ್ತವರ ಮರೆಯದಿರಿ

ಉಡುಪಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಉದ್ಘಾಟಿಸಿದರು. ಡಾ. ಜಸಿಂತಾ ಡಿಸೋಜಾ, ಜಾನ್​ ಡಿಸಿಲ್ವಾ, ಮೆಲ್ವಿನ್​ ಅರಾನ್ಹಾ, ಗ್ಲಾಡಿಸ್​ ಡಿಸಿಲ್ವಾ, ರೊನಾಲ್ಡ್​ ಅಲ್ಮೇಡಾ, ಉರ್ಬಾನ್​ ಲೂವಿಸ್​, ಡಾ. ಜೆರಾಲ್ಡ್​ ಪಿಂಟೋ, ವಾಲ್ಟರ್​ ಸಿರಿಲ್​ ಪಿಂಟೋ ಇತರರಿದ್ದರು.
ಉಡುಪಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಉದ್ಘಾಟಿಸಿದರು. ಡಾ. ಜಸಿಂತಾ ಡಿಸೋಜಾ, ಜಾನ್​ ಡಿಸಿಲ್ವಾ, ಮೆಲ್ವಿನ್​ ಅರಾನ್ಹಾ, ಗ್ಲಾಡಿಸ್​ ಡಿಸಿಲ್ವಾ, ರೊನಾಲ್ಡ್​ ಅಲ್ಮೇಡಾ, ಉರ್ಬಾನ್​ ಲೂವಿಸ್​, ಡಾ. ಜೆರಾಲ್ಡ್​ ಪಿಂಟೋ, ವಾಲ್ಟರ್​ ಸಿರಿಲ್​ ಪಿಂಟೋ ಇತರರಿದ್ದರು.
Published on

* ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಕಿವಿಮಾತು

* ಕಕ್ಕುಂಜೆ ಚರ್ಚ್​ನಲ್ಲಿ ಪ್ರತಿಭಾ ಪುರಸ್ಕಾರ

ಉಡುಪಿ: ಮಕ್ಕಳ ಶೈಕ್ಷಣಿಕ ಭವಿಷ್ಯ ಉತ್ತಮ ಪಡಿಸಲು ಪಾಲಕರು ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಗ್ರಾಮೀಣ ವಿದ್ಯಾರ್ಥಿಗಳು ಇರುವ ಸೌಲಭ್ಯ ಉಪಯೋಗಿಸಿಕೊಂಡು ಉತ್ತಮ ಅಂಕ ಗಳಿಸಬೇಕು. ವಿದ್ಯಾಭ್ಯಾಸ ಪಡೆದು ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಾವು ಹುಟ್ಟಿದ ಊರು ಮತ್ತು ಹೆತ್ತವರನ್ನು ಎಂದಿಗೂ ಮರೆಯಬಾರದು ಎಂದು ಉಡುಪಿ ಕಥೋಲಿಕ್​ ಧರ್ಮ ಪ್ರಾಂತ್ಯದ ಅಧ್ಯಕ್ಷ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಕಿವಿಮಾತು ಹೇಳಿದರು.
ಉಡುಪಿಯ ಕಕ್ಕುಂಜೆಯಲ್ಲಿರುವ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕೆಥೋಲಿಕ್​ ಸಭಾ ಉಡುಪಿ ಪ್ರದೇಶ ಹಾಗೂ ಜಾನ್​ ಡಿಸಿಲ್ವಾ ಫೌಂಡೇಷನ್​ ಮುಂಬಯಿ ಇವರ ಸಹಕಾರದಲ್ಲಿ ಭಾನುವಾರ (ಜು.26) ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒತ್ತಡ ಹೇರಬೇಡಿ
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಜಸಿಂತಾ ಡಿಸೋಜಾ ಮಾತನಾಡಿ, ಮಕ್ಕಳಿಗೆ ತಮ್ಮ ಭವಿಷ್ಯದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪಾಲಕರು ಮುಕ್ತ ಅವಕಾಶ ನೀಡಬೇಕು. ಅವರಿಗೆ ಯಾವುದೇ ಒತ್ತಡ ಹೇರದೆ ಅವರ ಅಪೇಕ್ಷೆಯಂತೆ ಕಲಿಯಲು ಅವಕಾಶ ಕೊಟ್ಟಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಫೌಂಡೇಷನ್​ನ ಮುಖ್ಯಸ್ಥ ಜಾನ್​ ಡಿಸಿಲ್ವಾ ಮಾತನಾಡಿ, ಇಂದಿನ ಡಿಜಿಟಲ್​ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕೆಥೋಲಿಕ್​ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್​ ಅರಾನ್ಹಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ಲಾಡಿಸ್​ ಡಿಸಿಲ್ವಾ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್​ ಅಲ್ಮೆಡಾ, ಕೋಶಾಧಿಕಾರಿ ಉರ್ಬಾನ್​ ಲೂವಿಸ್​, ಮಾಜಿ ಅಧ್ಯಕ್ಷ ವಾಲ್ಟರ್​ ಸಿರಿಲ್​ ಪಿಂಟೋ, ದಲೇರಿಯನ್​ ಫೆರ್ನಾಂಡಿಸ್​, ಆಲ್ವಿನ್​ ಕ್ವಾಡ್ರಸ್​, ಸಂತೋಷ್​ ಕರ್ನೆಲಿಯೋ, ಪದಾಧಿಕಾರಿಗಳಾದ ಲೂಯಿಸ್​ ಡಿಸೋಜಾ, ಸೋನು ಸಿಕ್ವೇರಾ, ತಿಯೋಧರ್​ ಮೆಂಡೊನ್ಸಾ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಡಾ. ಜೆರಾಲ್ಡ್​ ಪಿಂಟೋ ಸ್ವಾಗತಿಸಿದರು. ಕಾರ್ಯದರ್ಶಿ ಜೂಲಿಯೇಟ್​ ಡಿಸೋಜಾ ವಂದಿಸಿದರು. ಅಲನಿ ದಾಂತಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐದು ವಿದ್ಯಾರ್ಥಿಗಳು, ಪಿಎಚ್​ಡಿ ಗಳಿಸಿದ ಏಳು ಮಂದಿ ಹಾಗೂ ಧರ್ಮ ಪ್ರಾಂತ್ಯದ 52 ಚರ್ಚ್​ ವ್ಯಾಪ್ತಿಯ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
"

ಇಂದಿನ ಪೈಪೋಟಿ ಯುಗದಲ್ಲಿ ಉನ್ನತ ಸ್ಥಾನದಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ಹುಟ್ಟಿದ ಊರು ನಮ್ಮ ಅಸ್ತಿತ್ವದ ಬೇರು. ಬೆಳೆದ ಮೇಲೆ ಆ ಊರಿನ ಪ್ರಗತಿಗೆ ಕೈಲಾದಷ್ಟು ಕೊಡುಗೆ ನೀಡುವುದು ವಿದ್ಯಾರ್ಥಿಗಳ ಜವಾಬ್ದಾರಿ. ಯಶಸ್ಸಿನೊಂದಿಗೆ ಮಾನವೀಯ ಮೌಲ್ಯ ಮತ್ತು ಕೃತಜ್ಞತಾ ಭಾವ ಇದ್ದಾಗ ಮಾತ್ರ ಪಡೆದ ಶಿಕ್ಷಣದಿಂದ ನಿಜವಾದ ಸಾರ್ಥಕತೆ ಲಭಿಸುತ್ತದೆ.

— ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ. ಉಡುಪಿ ಕೆಥೋಲಿಕ್​ ಧರ್ಮ ಪ್ರಾಂತ್ಯದ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net