ಗಂಗೊಳ್ಳಿಯಲ್ಲಿ ಪ್ರತಿಭಾ ಪುರಸ್ಕಾರ, ಆರ್ಥಿಕ ನೆರವು ಕಾರ್ಯಕ್ರಮ

ಗಂಗೊಳ್ಳಿ ಬಂದರು ಪಂಚಗಂಗಾವಳಿ ಬಳಗದ 32ನೇ ವಾರ್ಷಿಕೋತ್ಸವ ಸವಾರಂಭದಲ್ಲಿ ಮುಳುಗು ತಜ್ಞರಾದ ಈಶ್ವರ ಮಲ್ಪೆ, ದಿನೇಶ ಖಾರ್ವಿ ಅವರನ್ನು ಗೌರವಿಸಲಾಯಿತು. ನರಸಿಂಹ ದೇವಾಡಿಗ, ರಾವೇಂದ್ರ ಮೇಸ್ತ ಗುಜ್ಜಾಡಿ, ಯೋಗೀಶ್ ಆರ್ಕಾಟಿ ಉಪಸ್ಥಿತರಿದ್ದರು.
ಗಂಗೊಳ್ಳಿ ಬಂದರು ಪಂಚಗಂಗಾವಳಿ ಬಳಗದ 32ನೇ ವಾರ್ಷಿಕೋತ್ಸವ ಸವಾರಂಭದಲ್ಲಿ ಮುಳುಗು ತಜ್ಞರಾದ ಈಶ್ವರ ಮಲ್ಪೆ, ದಿನೇಶ ಖಾರ್ವಿ ಅವರನ್ನು ಗೌರವಿಸಲಾಯಿತು. ನರಸಿಂಹ ದೇವಾಡಿಗ, ರಾವೇಂದ್ರ ಮೇಸ್ತ ಗುಜ್ಜಾಡಿ, ಯೋಗೀಶ್ ಆರ್ಕಾಟಿ ಉಪಸ್ಥಿತರಿದ್ದರು.
Published on
ಕುಂದಾಪುರ: ಗಂಗೊಳ್ಳಿ ಬಂದರು ಪಂಚಗಂಗಾವಳಿ ಬಳಗದ 32ನೇ ವಾರ್ಷಿಕೋತ್ಸವ ಮತ್ತು ಪಂಚಗಂಗಾವಳಿ ವಿದ್ಯಾನಿಧಿ ಯೋಜನೆ ವತಿಯಿಂದ 22ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಹಾಗೂ ಪಂಚಗಂಗಾವಳಿ ಸ್ವಾಸ್ಥ್ಯನಿಧಿ ಯೋಜನೆ ವತಿಯಿಂದ 17ನೇ ವರ್ಷದ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ಗಂಗೊಳ್ಳಿ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ಬುಧವಾರ ನಡೆಯಿತು.
ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ.ಚೇತನ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಪುರಸಭೆ ವ್ಯಾನೇಜರ್ ಸೂರ್ಯಕಾಂತ ಖಾರ್ವಿ, ಕೋಟ ಪರ್ಸಿನ್ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂ ನಿರ್ದೇಶಕ ಅಂಕಿತ್ ಶೆಟ್ಟಿ, ಗಂಗೊಳ್ಳಿ ಶ್ರೀ ನಾರಾಯಣ ಗುರು ಜನಸೇವಾ ಬಳಗ ಅಧ್ಯಕ್ಷ ಜಿ.ಗೋಪಾಲ ಪೂಜಾರಿ, ಡಾ.ಸಪ್ತಮಿ ಕೆ. ಮರವಂತೆ ಮತ್ತು ಕ್ಲಿನಿಕಲ್ ಡಯಾಟಿಸಿಯನ್ ಎಂ.ಮನಿಲಾ ಶುಭ ಹಾರೈಸಿದರು.
ಮುಳುಗು ತಜ್ಞರಾದ ಈಶ್ವರ ಮಲ್ಪೆ, ದಿನೇಶ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಪಂಚಗಂಗಾವಳಿ ವಿದ್ಯಾನಿಧಿ ಯೋಜನೆ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ 10 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ಅರ್ಹ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪಂಚಗಂಗಾವಳಿ ಸ್ವಾಸ್ಥ್ಯನಿಧಿ ಯೋಜನೆ ವತಿಯಿಂದ 15 ಬಡ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.
ಗಂಗೊಳ್ಳಿ ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ನರಸಿಂಹ ದೇವಾಡಿಗ, ಗಂಗೊಳ್ಳಿಯ ಮತ್ಸ್ಯೋದ್ಯಮಿ ರಾವೇಂದ್ರ ಮೇಸ್ತ ಗುಜ್ಜಾಡಿ ಮತ್ತು ಯೋಗೀಶ್ ಆರ್ಕಾಟಿ ಉಪಸ್ಥಿತರಿದ್ದರು.
ರೋಶನ್ ಎನ್.ಖಾರ್ವಿ ಸ್ವಾಗತಿಸಿದರು. ಸಜಿತ್ ಬಿ.ಸಂದೇಶ ವಾಚಿಸಿದರು. ಕಾರ್ಯದರ್ಶಿ ಜಿ.ಎಂ.ರಾವೇಂದ್ರ ಖಾರ್ವಿ ವರದಿ ವಾಚಿಸಿದರು. ಶೋಭಾ ಎಸ್.ಆರ್ಕಾಟಿ ಮತ್ತು ಪಲ್ಲವಿ ಸಂದೀಪ್ ಸನ್ಮಾನಿತರನ್ನು ಪರಿಚಯಿಸಿದರು. ಪಲ್ಲವಿ ಎನ್.ಬಹುವಾನ ವಿಜೇತರ ಪಟ್ಟಿ ವಾಚಿಸಿದರು. ಸುಂದರ ಜಿ.ನಿರೂಪಿಸಿದರು. ರೇಖಾ ಆರ್.ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net