ಜಗಕ್ಕೆ ಗೀತಾ ಸಂದೇಶ ತಲುಪಿಸಿದ ವಿವೇಕಾನಂದ

ಉಡುಪಿಯ ರಾಜಾಂಗಣದಲ್ಲಿ ಸಂತ ಸಂದೇಶ ನೀಡಿದ ಬೈಲೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯಕಾನಂದಾಜೀ ಮಹಾರಾಜ್​ಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ಶ್ರೀ ಇದ್ದರು.
ಉಡುಪಿಯ ರಾಜಾಂಗಣದಲ್ಲಿ ಸಂತ ಸಂದೇಶ ನೀಡಿದ ಬೈಲೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯಕಾನಂದಾಜೀ ಮಹಾರಾಜ್​ಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ಶ್ರೀ ಇದ್ದರು.
Published on

* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
* ಗೀತೋತ್ಸವದಲ್ಲಿ ಸಂತ ಸಂದೇಶ-ಸನ್ಮಾನ

ಉಡುಪಿ: ಸ್ವಾಮಿ ವಿವೇಕಾನಂದರು ಜಗತ್ತಿಗೇ ಭಗವದ್ಗೀತೆಯ ಸಂದೇಶ ಸಾರಿದವರು. "ಬ್ರದರ್ಸ್​ ಆ್ಯಂಡ್​ ಸಿಸ್ಟರ್ಸ್​' ಎಂಬ ಕೇವಲ ಎರಡೇ ಶಬ್ದಗಳಲ್ಲಿ ಜಗತ್ತನ್ನು ಆಕರ್ಷಿಸಿದ್ದರು. ಪ್ರತಿಯೊಬ್ಬರನ್ನೂ ನಾವು ಸಹೋದರ ಭಾವದಿಂದ ನೋಡಬೇಕೆಂದು ಗೀತೆಯಲ್ಲಿ ಶ್ರೀಕೃಷ್ಣನೇ ಉಪದೇಶಿಸಿದ್ದಾನೆ. ಅಂತಹ ಎರಡೇ ಶಬ್ದದಲ್ಲಿ ಭಗವದ್ಗೀತೆಯ ಸಂದೇಶವನ್ನು ವಿವೇಕರು ಜಗತ್ತಿಗೆ ಎತ್ತಿ ತೋರಿದರು. ಜಾಗತಿಕ ಮಟ್ಟದಲ್ಲಿ ಹಿಂದು ಧರ್ಮ ಗುರುತಿಸಿಕೊಂಡಿದ್ದು ವಿವೇಕಾನಂದರ ಸಾಧನೆಯಿಂದ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು. 
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಶುಕ್ರವಾರ (ಡಿ.12) ಆಯೋಜಿಸಿದ್ದ ಸಂತ- ಸಂದೇಶ, ಸಂತ -ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀರಾಮ-ಕೃಷ್ಣ ಮಹತ್ವದ ಅವತಾರ

ಸಂತ ಸಂದೇಶ ನೀಡಿದ ಬೈಲೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ  ವಿನಾಯಕಾನಂದಾಜೀ ಮಹಾರಾಜ್​ ಮಾತನಾಡಿ, ರಾಮಾಯಣ ಹಾಗೂ ಮಹಾಭಾರತ ಗ್ರಂಥವು ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕವಾಗಿದೆ. ಶ್ರೀರಾಮಚಂದ್ರ ಹಾಗೂ ಶ್ರೀಕೃಷ್ಣನ ಅವತಾರವು ಅತ್ಯಂತ ಮಹತ್ವದ್ದಾಗಿದೆ. ಭಗವಂತನಿಗಾಗಿ ನಾವು ವ್ಯಾಕುಲತೆ ಹೊಂದಿದಾಗ ಆತನ ಸಾಕ್ಷಾತ್ಕಾರವಾಗಲಿದೆ. ವನವಾಸದಲ್ಲಿದ್ದ ಶ್ರೀರಾಮನನ್ನು ಕಂಡಾಗ ಭರತನ ನರಳುವಿಕೆ, ದುಃಖ ನಾಟಕೀಯವಲ್ಲ. ಅದು ವ್ಯಾಕುಲ ಹೃದಯದಿಂದ ಬಂದ ದುಃಖ-ಸಂತಸ. ಅದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದು. ಅದು ಭಗವಂತನ ಇಚ್ಛೆಯಿಂದ ಹಾಗೂ ದೈವಜಾತವಾಗಿ ಬರುವ ದುಃಖ. ಕುರುಕ್ಷೇತ್ರದಲ್ಲಿ ಅರ್ಜುನನ ಅವಸ್ಥೆಯೂ ಅದೇ ಆಗಿತ್ತು. ಅದರಲ್ಲಿ ಯಾರ ದೋಷವೂ ಇಲ್ಲ. ಎಲ್ಲ ಕರ್ತವ್ಯ ಮಾಡುತ್ತ ಭಗವಂತನಿಗೆ ಶರಣಾಗುವುದೇ ಮಾನವ ಜನ್ಮದ ಏಕೈಕ ಉದ್ದೇಶವಾಗಿದೆ ಎಂದರು.

'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ಪ್ರದಾನ

ಪರ್ಯಾಯ ಪುತ್ತಿಗೆ ಮಠದಿಂದ ಬೈಲೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯಕಾನಂದಾಜೀ ಮಹಾರಾಜ್​ ಅವರಿಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ಹಾಗೂ ಶ್ರೀಕೃಷ್ಣನ ಕಡಗೋಲು ನೀಡಿ ಗೌರವಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಪುಸ್ತಕ ಬಿಡುಗಡೆ

ಮೈಸೂರಿನ ರವೀಂದ್ರರಾವ್​ (ಹರಿಭಕ್ತ) ವಿರಚಿತ 'ದೇವಕಿ ಪುತ್ರ ಗೀತಂ ಏಕಂ ಶಾಸ್ತ್ರಂ' ಎಂಬ ಆಂಗ್ಲ ಪುಸ್ತಕವನ್ನು ಶ್ರೀಗಳು ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯ ಮುದ್ರಕರ ಸಂಘದ ಅಧ್ಯಕ್ಷ ಅಶೋಕಕುಮಾರ್​, ಪ್ರಿಂಟ್​ ಟೆಕ್​ ಕ್ಲಸ್ಟರ್​ ಸೆಂಟರ್​ನ ಸಿ.ಆರ್​. ಜನಾರ್ದನ್​ ಇತರರು ಪರ್ಯಾಯ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.
ಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ರವೀಂದ್ರ ಆಚಾರ್ಯ ಸಹಕರಿಸಿದರು.
"

ಉಡಪಿ ಶ್ರೀಕೃಷ್ಣ ಮಠದ ರಾಜಾಂಗಣ ವಿಶ್ವದಲ್ಲೇ ಅತ್ಯಂತ ಅಪರೂಪದ ಸ್ಥಳ. ಶತಶತಮಾನಗಳಿಂದ ಪರ್ಯಾಯದ ದರ್ಬಾರ್​ನೊಂದಿಗೆ ಜನರಿಗೆ ಜ್ಞಾನ ಹಾಗೂ ಕಲೆ, ಸಾಂಸ್ಕೃತಿಕ ದಾಹ ನೀಗಿಸಿದ ಪವಿತ್ರ ತಾಣ. ಇಲ್ಲಿ ಕಾರ್ಯಕ್ರಮ ನೀಡದಿದ್ದರೆ ಅವರು ಕಲಾವಿದರೇ ಅಲ್ಲ ಎಂಬಷ್ಟರ ಮಟ್ಟಿಗೆ ಈ ವೇದಿಕೆ ಖ್ಯಾತಿ ಪಡೆದಿದೆ. ಪ್ರತಿಯೊಂದು ಕಲಾವಿದರು, ವಿದ್ವಾಂಸರು ಶ್ರೀಕೃಷ್ಣನ ಸನ್ನಿಧಿಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net