ಭ್ರಾಮರಿ ಗ್ರೂಪ್, ಮೂಲ್ಕಿ ಅಕ್ಕ ಸಂಜೀವಿನಿ ಅಂಗಡಿ ಸಹಭಾಗಿತ್ವದಲ್ಲಿ ಸ್ವದೇಶಿ ಮೇಳಕ್ಕೆ ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಚಾಲನೆ ನೀಡಿದರು. ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಭ್ರಾಮರಿ ಗ್ರೂಪ್‌ನ ಸುಜನಾ ಶೆಟ್ಟಿ, ರೇಖಾ ಶೆಟ್ಟಿ, ವಸಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ: ಮಹಿಳೆಯರು ಸ್ವಾವಲಂಬಿಗಳಾಗಿ ಬೆಳೆಯಲು ಸ್ವ ಉದ್ಯೋಗ ಪೂರಕವಾಗಿದ್ದು, ಸ್ವದೇಶಿ ಮೇಳದಂತಹ ಕಾರ್ಯಕ್ರಮಗಳು ಉದ್ಯಮಶೀಲತೆ ಬೆಳವಣಿಗೆಗೆ ಬಹು ಪೂರಕ ಎಂದು ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು.
ಮೂಲ್ಕಿಯ ಬಪ್ಪನಾಡು ಶ್ರೀ ಅನ್ನಪೂರ್ಣೇಶ್ವರೀ ಸಭಾಗೃಹದಲ್ಲಿ ಭ್ರಾಮರಿ ಗ್ರೂಪ್, ಮೂಲ್ಕಿ ಅಕ್ಕ ಸಂಜೀವಿನಿ ಅಂಗಡಿ ಸಹಭಾಗಿತ್ವದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ಎರಡನೇ ಬಾರಿಗೆ ಸ್ವದೇಶಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಭಾರತ ದೇಶದ ಸಂಸ್ಕೃತಿ, ಸಂಸ್ಕಾರದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಮಹಿಳಾ ಸ್ವಉದ್ಯೋಗದ ಮೂಲಕ ಸಣ್ಣ ಕೈಗಾರಿಕೆಗಳು ಉದ್ದಿಮೆಗಳು ಬೆಳೆದು ಪ್ರಾದೇಶಿಕ ಅಭಿವೃದ್ಧಿಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭ್ರಾಮರಿ ಗ್ರೂಪ್‌ನ ಸುಜನಾ ಶೆಟ್ಟಿ, ರೇಖಾ ಶೆಟ್ಟಿ, ವಸಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಕಾಲ ಸ್ವದೇಶಿ ಬೃಹತ್ ಮಾರಾಟ ಮೇಳ ನಡೆಯಲಿದೆ.