ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ಶ್ಲಾಘನೀಯ

 ಪತ್ರಕರ್ತ ದಿ.ಗುರುವಪ್ಪ ಎನ್.ಟಿ.ಬಾಳೇಪುಣಿಯವರ ಸ್ಮರಣಾರ್ಥ ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ ನೆರವೇರಿತು. ಪ್ರಶಾಂತ್, ರಾಧಾಕೃಷ್ಣ ರೈ, ಶೀನ ಶೆಟ್ಟಿ, ಖಾದರ್ ಶಾ, ಪಿ.ಬಿ.ಹರೀಶ್ ರೈ ಇದ್ದರು.
ಪತ್ರಕರ್ತ ದಿ.ಗುರುವಪ್ಪ ಎನ್.ಟಿ.ಬಾಳೇಪುಣಿಯವರ ಸ್ಮರಣಾರ್ಥ ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ ನೆರವೇರಿತು. ಪ್ರಶಾಂತ್, ರಾಧಾಕೃಷ್ಣ ರೈ, ಶೀನ ಶೆಟ್ಟಿ, ಖಾದರ್ ಶಾ, ಪಿ.ಬಿ.ಹರೀಶ್ ರೈ ಇದ್ದರು.
Published on
ಮಂಗಳೂರು: ಅರ್ಹ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿ ಸಹಾಯಧನ ನೀಡುವ ಒಳ್ಳೆಯ ಕೆಲಸ ಮಾಡಲಾಗಿದೆ. ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ ಶಾಲಾ ದಿನಗಳಿಂದಲೇ ನಾಯಕತ್ವದ ಗುಣ ಹೊಂದಿದವರಾಗಿದ್ದರು. ಸಾಮಾಜಿಕವಾಗಿಯೂ ಕೆಲಸ ಮಾಡಿದ್ದರು. ಅವರ ಹೆಸರಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಹೇಳಿದರು.
ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಶುಕ್ರವಾರ ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಹಿರಿಯ ಪತ್ರಕರ್ತ ದಿ.ಗುರುವಪ್ಪ ಎನ್.ಟಿ.ಬಾಳೇಪುಣಿ ಸ್ಮರಣಾರ್ಥ ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಉಮಿಯ ರಾಧಾಕೃಷ್ಣ ರೈ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉತ್ತಮ ಕೆಲಸದ ಮೂಲಕ ಬಾಳೆಪುಣಿ ಅವರ ನೆನಪನ್ನು ಉಳಿಸುವ ಕೆಲಸ ಮಾಡಲಾಗಿದೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿ ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯವಾಗಿದೆ ಎಂದರು.
ಟ್ರಸ್ಟ್ ವತಿಯಿಂದ ಒಟ್ಟು 8 ಮಂದಿಗೆ 1.50 ಲಕ್ಷ ರೂ. ಮೊತ್ತದ ದತ್ತಿನಿಧಿ ಸಹಾಯ ನೀಡಲಾಯಿತು. ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಕಾರ್ಯನಿರತ ಪತ್ರಕರ್ತರ ಸಂ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ವಾರ್ತಾಧಿಕಾರಿ ಖಾದರ್ ಶಾ, ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಲೋಕೇಶ್ ಭಂಡಾರಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕರಾವಳಿ ಕುರುಬರ ಸಂ ಅಧ್ಯಕ್ಷ ನಿರಂಜನ್ ಎಲ್.ಆರ್. ಗಾಂಧಿನಗರ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಪಂಜಿಮೊಗರು, ಟ್ರಸ್ಟಿಗಳಾದ ಪ್ರಶಾಂತ್ ಅಬ್ಬೆಟ್ಟು, ದಿನೇಶ್ ನಾಯ್ಕ ಕಾಶಿಪಟ್ಣ, ಬಾಳೇಪುಣಿ ಅವರ ಪತ್ನಿ ಜಯಂತಿ ಬಾಳೇಪುಣಿ, ಪುತ್ರ ಮನೇಶ್ ಬಾಳೇಪುಣಿ ಉಪಸ್ಥಿತರಿದ್ದರು.
ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೋಹನ್‌ದಾಸ್ ಮರಕಡ ಪ್ರಸ್ತಾವನೆಗೈದರು. ಪತ್ರಕರ್ತ ಅನ್ಸಾರ್ ಇನೋಳಿ ಸ್ವಾಗತಿಸಿದರು. ಮಾನಸ ವಂದಿಸಿದರು. ಬಬಿತಾ ಎಂ. ಮರಕಡ ಕಾರ್ಯಕ್ರಮ ನಿರೂಪಿಸಿದರು.

ಇಂದು ನೆರವು ಪಡೆದು ವಿದ್ಯಾರ್ಥಿಗಳು ಬಾಳೆಪುಣಿ ಅವರನ್ನು ಮೀರಿ ಬೆಳೆಯಬೇಕು. ಪತ್ರಕರ್ತರು ಸತ್ಯ, ಪ್ರಾಮಾಣಿಕತೆ, ಸೇವಾ ಪರತೆಯಿಂದ ಕೆಲಸ ವಾಡುತ್ತಾರೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ನಿದರ್ಶನ.

— ಶೀನ ಶೆಟ್ಟಿ ಜಿಲ್ಲಾ ಸ್ವಚ್ಛತಾ ರಾಯಬಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net