ಹೃದಯ ವೈಶಾಲ್ಯತೆ ಪರಿಪೂರ್ಣ ಕಲಾವಿದರ ಲಕ್ಷಣ : ಸಂಜೀವ ದಾಂಡೇಕೆರಿ

ಸುಮನಸ ಕೊಡವೂರು ರಂಗ ಹಬ್ಬ ಉದ್ಘಾಟನೆ
ಸುಮನಸ ಕೊಡವೂರು ರಂಗ ಹಬ್ಬ ಉದ್ಘಾಟನೆ
Published on
ಉಡುಪಿ: ಕಲಾವಿದ ಕಲಾ ಪ್ರದರ್ಶನ ನೀಡಿದರೆ ಪೂರ್ಣನಾಗುವುದಿಲ್ಲ. ಆತ ಸಹೃದಯನಾಗಬೇಕು, ವಿಶಾಲ ಹೃದಯಿ ಆಗಿರಬೇಕು. ಆಗ ಮಾತ್ರ ಪೂರ್ಣಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ ಎಂದು ರಂಗಕರ್ಮಿ ಸಂಜೀವ ದಂಡೆಕೇರಿ ಹೇಳಿದರು.
ಸುಮನಸಾ ಕೊಡವೂರು ಸಾಂಸ್ಕøತಿಕ ಸಂಘಟನೆ ವತಿಯಿಂದ ಭಾನುವಾರ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕಗಳನ್ನು ನೋಡುವವರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ಧಾರಾವಾಹಿಗಳು, ಮೊಬೈಲ್ ಇದಕ್ಕೆ ಕಾರಣ ಇರಬಹುದು. ಆದರೂ ಸಮಾಜದ ಹಿತಕ್ಕಾಗಿ ರಂಗಚಟುವಟಿಕೆ ಜಾಸ್ತಿಯಾಗಬೇಕು ಎಂದು ಆಶಿಸಿದರು.
ನನ್ನ ಬಯ್ಯಮಲ್ಲಿಗೆ ನಾಟಕವು ತುಳು, ಕನ್ನಡ, ಹಿಂದಿ, ಕೊಂಕಣಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶನಗೊಂಡಿದೆ. 28 ಸಾವಿರ ಪ್ರದರ್ಶನಗಳವರೆಗೆ ನಾನು ಲೆಕ್ಕ ಇಟ್ಟಿದ್ದೆ. ಆನಂತರ ಲೆಕ್ಕ ಇಟ್ಟಿಲ್ಲ. ಇದೇ ಬಯ್ಯಮಲ್ಲಿಗೆ ಸಿನಿಮಾ ಕೂಡ ಆಯಿತು ಎಂದು ಹೇಳಿದರು.
ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ರಂಗಸಾಧಕ ಸನ್ಮಾನ ಸ್ವೀಕರಿಸಿದರು.
ಅಧ್ಯಕ್ಷತೆ ವಹಿಸಿದ್ದ ನೂತನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಗಣೇಶ್ ಶೇರಿಗಾರ್ ಮಾತನಾಡಿದರು.
ಉದ್ಯಮಿ ರಾಕೇಶ್ ಜೋಗಿ, ಉದ್ಯಮಿ ನಾಗರಾಜ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷ ಸಂತೋಷ್ ಉದ್ಯಾವರ, ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ,ಎಸ್, ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು,
ಸುಮನಸಾ ಕೊಡವೂರು ಸಾಂಸ್ಕøತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಸದಸ್ಯೆ ಅಂಬಿಕಾ ವಂದಿಸಿದರು. ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net