ಸುಳ್ಯ ಯುವಜನ ಸಂಘದ ಭೋಜನ ಕಟ್ಟಡ ಲೋಕಾರ್ಪಣೆ

ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಯುವಜನ ಸೇವಾ ಸಂಸ್ಥೆಯಲ್ಲಿ ನಿರ್ಮಾಣಗೊಂಡ ಭೋಜನ ಶಾಲೆಯ ಕಟ್ಟಡ ಅನ್ನಪೂರ್ಣವನ್ನು ಶಾಸಕಿ ಭಾಗೀರಥಿ ಮುರುಳ್ಯ ಲೋಕಾರ್ಪಣೆಗೊಳಿಸಿದರು. ಮಾಜಿ ಶಾಸಕ ಎಸ್.ಅಂಗಾರ, ದೀಪಕ್ ಕುತ್ತಮೊಟ್ಟೆ, ಪವನ್ ಪಲ್ಲತ್ತಡ್ಕ ಇತರರು ಇದ್ದರು.

Published on

ಸುಳ್ಯ: ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಯುವಜನ ಸೇವಾ ಸಂಸ್ಥೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಭೋಜನ ಶಾಲೆಯ ವಿಸ್ತೃತ ಕಟ್ಟಡ ‘ಅನ್ನಪೂರ್ಣ’ ಲೋಕಾರ್ಪಣಾ ಸಮಾರಂಭ ಶನಿವಾರ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಲೋಕಾರ್ಪಣೆ ಮಾಡಿದರು.

ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಯುವಜನ ಸೇವಾ ಸಂಸ್ಥೆ ಕೋಶಾಧಿಕಾರಿ ಅನಿಲ್ ಪೂಜಾರಿಮನೆ ಉಪಸ್ಥಿತರಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಮುಖ್ಯ ಅತಿಥಿ ಮಾಜಿ ಸಚಿವ ಎಸ್.ಅಂಗಾರ ಅವರನ್ನು ಸನ್ಮಾನಿಸಲಾಯಿತು.

ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ನಿತೇಶ್ ಎರ್ಮೆಟ್ಟಿ ಪ್ರಾರ್ಥಿಸಿದರು. ಯುವಜನ ಸೇವಾ ಸಂಸ್ಥೆ ಗೌರವ ಕಾರ್ಯದರ್ಶಿ ದಯಾನಂದ ಕೇರ್ಪಳ ಸ್ವಾಗತಿಸಿದರು. ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಪ್ರಸಾದ್ ಕಾಟೂರು, ಗೌರವಾಧ್ಯಕ್ಷ ವಿಜಯ ಕುಮಾರ್ ಉಬರಡ್ಕ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net