ಭಗವದ್ಗೀತೆಯ ಅನುಸರಣೆಯಿಂದ ಮಾತ್ರ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಅದಕ್ಕಾಗಿಯೇ ತಾವು ಕೋಟಿ ಗೀತಾ ಲೇಖನ ಯಜ್ಞ ನಡೆಸುತ್ತಿರುವುದಾಗಿ ಶ್ರೀಗಳು ತಿಳಿಸಿದರು. ಭಾರತವಷ್ಟೇ ಅಲ್ಲದೆ ವಿಶ್ವದಾದ್ಯಂತ ಜನರು ಗೀತೆಯನ್ನು ಬರೆದು, ಅನುಸರಿಸಿ ಸನ್ನಡತೆ ಅಳವಡಿಸಿಕೊಂಡಿದ್ದಾರೆ ಎಂದರು. ಶ್ರೀಗಳ ಈ ಮಾತಿನಿಂದಲೂ ಪ್ರಭಾವಿತರಾದ ಧರಮ್ ಬೀರ್ ಗೋಕುಲ್, ಮಾರಿಷಸ್ನ ಪ್ರಜೆಗಳಿಗೂ ಮಾರ್ಗದರ್ಶನ ನೀಡುವಂತೆ ಕೋರಿದರು. ಶ್ರೀಗಳಿಂದ ಆಶೀರ್ವಾದ ಪಡೆದು, ಗೀತಾ ಲೇಖನದ ದೀಕ್ಷೆ ಪಡೆದರು.