ದೈವಿಕ ರಕ್ಷಣೆಯ ಒಡನಾಡಿ ಹನುಮಾನ ಚಾಲೀಸಾ

ಉಡುಪಿಯ ಗೀತಾಮಂದಿರದಲ್ಲಿ ಸುಗುಣೇಂದ್ರ ಶ್ರೀಗಳು ಹನುಮಾನ ಚಾಲೀಸಾ ಗ್ರಂಥ, ಧ್ವನಿಸುರುಳಿ ಬಿಡುಗಡೆ ಮಾಡಿದರು. ಕೆ.ವಿ. ರಮಣ್​ ಆಚಾರ್ಯ, ಅಯನಾ ವಿ. ರಮಣ್​ ಇದ್ದರು.
ಉಡುಪಿಯ ಗೀತಾಮಂದಿರದಲ್ಲಿ ಸುಗುಣೇಂದ್ರ ಶ್ರೀಗಳು ಹನುಮಾನ ಚಾಲೀಸಾ ಗ್ರಂಥ, ಧ್ವನಿಸುರುಳಿ ಬಿಡುಗಡೆ ಮಾಡಿದರು. ಕೆ.ವಿ. ರಮಣ್​ ಆಚಾರ್ಯ, ಅಯನಾ ವಿ. ರಮಣ್​ ಇದ್ದರು.
Published on

* ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ ಆಶೀರ್ವಚನ

* ಗೀತಾಮಂದಿರದಲ್ಲಿ ಗ್ರಂಥ, ಧ್ವನಿಸುರುಳಿ ಬಿಡುಗಡೆ

ಉಡುಪಿ: ಸಾಂಪ್ರದಾಯಿಕ ದಾರ ಮತ್ತು ಮಣಿಯಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಹನುಮಾನ ಚಾಲೀಸಾ ಪ್ರಾರ್ಥನಾ ಪುಸ್ತಕವು ಭಕ್ತಿ, ನಂಬಿಕೆ ಮತ್ತು ದೈವಿಕ ರಕ್ಷಣೆಯ ನಿತ್ಯ ಒಡನಾಡಿಯಾಗಿದೆ. ಪ್ರತಿನಿತ್ಯ ಹನುಮಾನ ಚಾಲೀಸಾ ಪಠಣದಿಂದ ಜೀವನದ ದುಗುಡಗಳೆಲ್ಲ ನಿವಾರಣೆಯಾಗಲಿದೆ. ಈ ಬಾರಿಯ ಹನುಮ ಜಯಂತಿಯು ಶ್ರೀರಾಮ, ಕೃಷ್ಣ, ಹನುಮನ ಭಕ್ತರಿಗಷ್ಟೇ ಅಲ್ಲದೆ ಸಮಸ್ತ ಆಸ್ತಿಕ ಲೋಕಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಹನುಮ ಜಯಂತಿಯ ಶುಭ ಸಂದರ್ಭಕ್ಕಾಗಿ ಸೈಕಲ್​ ಪ್ಯೂರ್​ ಅಗರಬತ್ತಿ ಸಂಸ್ಥೆಯು ಸಿದ್ಧಪಡಿಸಿದ ಹನುಮಾನ ಚಾಲೀಸಾ ಗ್ರಂಥ ಮಾದರಿಯ ಸಾಂಪ್ರದಾಯಿಕ ಕಿರುಹೊತ್ತಗೆ (ಗ್ರಂಥ) ಹಾಗೂ ಧ್ವನಿ ಸುರುಳಿಯನ್ನು ಉಡುಪಿಯ ಗೀತಾಮಂದಿರದ ಲಡ್ಡುಕೃಷ್ಣನ ಸಾನ್ನಿಧ್ಯದಲ್ಲಿ ಮಂಗಳವಾರ (ಮಾ.31) ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಧ್ವನಿ ಸುರುಳಿಗೆ ಕಂಠದಾನ ಮಾಡಿದ ಪುತ್ತಿಗೆ ಮಠದ ವಿದ್ವಾಂಸ ವಿದ್ವಾನ್​ ಕೆ.ವಿ. ರಮಣ್​ ಆಚಾರ್ಯ ಹಾಗೂ ವಿದುಷಿ ಅಯನಾ ವಿ. ರಮಣ್​ ಅವರು ಸುಶ್ರಾವ್ಯವಾಗಿ ಹನುಮಾನ ಚಾಲೀಸಾ ಪಠಿಸಿದರು.
"

ಭಕ್ತರು ಮತ್ತು ಆಸಕ್ತರಿಗೆ ಹನುಮಾನ ಚಾಲೀಸಾ ಕೇಳಲು ಮತ್ತು ಓದಲು ಯೂಟ್ಯೂಬ್​ ಸೇರಿದಂತೆ ವಿವಿಧ ಆನ್​ಲೈನ್​ ವೇದಿಕೆಗಳಲ್ಲಿ ಲಭ್ಯವಿದೆ. ಮೈಸೂರಿನ ಎನ್​. ರಂಗರಾವ್​ ಆ್ಯಂಡ್​ ಸನ್ಸ್​ ಪ್ರೈವೇಟ್ ಲಿ. ಸಂಸ್ಥೆಯು ಈ ವಿಶೇಷ ಭಕ್ತಿ ಕಾಣಿಕೆಯನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net