ಲಂಡನ್ ನಿವಾಸಿಗರಿಗೂ ಧರ್ಮ, ಸಂಸ್ಕಾರ ನೀಡುವ ಧ್ಯೇಯ

ಲಂಡನ್ ನ ಸೈಂಟ್ ಅಲ್ಬನ್ಸ್ ಎಂಬಲ್ಲಿರುವ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ಸೈಂಟ್ ಆಲ್ಬನ್ಸ್ ಸಿಟಿಯ ಮೇಯರ್ ಮ್ಯಾಟ್ ಫಿಷರ್ ಮತ್ತು ಕೌನ್ಸಿಲರ್ ಸೀನ್ ಹಗ್ಸ್ ಅವರು ಸುಗುಣೇಂದ್ರ ಶ್ರೀಗಳಿಗೆ ಪೌರ ಸನ್ಮಾನ ಮಾಡಿದರು. ಡಾ.ಯೋಗೀಂದ್ರ ಭಟ್,  ಕೇಶವ್ ತುಕಾರಾಮ್ ಉಪಸ್ಥಿತರಿದ್ದರು.
ಲಂಡನ್ ನ ಸೈಂಟ್ ಅಲ್ಬನ್ಸ್ ಎಂಬಲ್ಲಿರುವ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ಸೈಂಟ್ ಆಲ್ಬನ್ಸ್ ಸಿಟಿಯ ಮೇಯರ್ ಮ್ಯಾಟ್ ಫಿಷರ್ ಮತ್ತು ಕೌನ್ಸಿಲರ್ ಸೀನ್ ಹಗ್ಸ್ ಅವರು ಸುಗುಣೇಂದ್ರ ಶ್ರೀಗಳಿಗೆ ಪೌರ ಸನ್ಮಾನ ಮಾಡಿದರು. ಡಾ.ಯೋಗೀಂದ್ರ ಭಟ್, ಕೇಶವ್ ತುಕಾರಾಮ್ ಉಪಸ್ಥಿತರಿದ್ದರು.
Published on

** ಪುತ್ತಿಗೆ ಸುಗುಣೇಂದ್ರ ಶ್ರೀ ಆಶೀರ್ವಚನ

** ಸೈಂಟ್ ಅಲ್ಬನ್ಸ್ ನಲ್ಲಿ ಪೌರ ಸನ್ಮಾನ

ಉಡುಪಿ: ಭೌಗೋಳಿಕವಾಗಿ ಮತ್ತು ವ್ಯಾವಹಾರಿಕವಾಗಿ ಸಮಸ್ತ ದೇಶಗಳಿಗೂ ಪ್ರಧಾನ ಕೇಂದ್ರದಂತಿರುವ ಲಂಡನ್ ಮಹಾನಗರವು ಪ್ರಸ್ತುತ  ಲಕ್ಷಾಂತರ ಭಾರತೀಯ ಹಿಂದೂಗಳಿಗೆ ಉದ್ಯೋಗ ಮತ್ತು ಆಶ್ರಯ ಕೊಟ್ಟಿದೆ. ನಮ್ಮ ಶ್ರೀಮಠದ ಲಂಡನ್ ಶಾಖೆ ಅವರಿಗೆ ಧರ್ಮ ಮತ್ತು ಸಂಸ್ಕಾರಗಳ ಮಾರ್ಗದರ್ಶನ ನೀಡುತ್ತಿದೆ. ಅವರ ಮುಂದಿನ ಪೀಳಿಗೆಯವರನ್ನೂ   ಸಂಸ್ಕಾರವಂತರನ್ನಾಗಿ, ಧರ್ಮಿಷ್ಠರನ್ನಾಗಿ, ಉತ್ತಮ ನಾಗರಿಕರನ್ನಾಗಿ ಬೆಳೆಯುವಂತೆ  ಮಾಡುವುದು ತಮ್ಮ ಧ್ಯೇಯ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಲಂಡನ್ ನ ಸೈಂಟ್ ಅಲ್ಬನ್ಸ್ ಎಂಬಲ್ಲಿರುವ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ಇಂಗ್ಲೆಂಡ್ ದೇಶಾದ್ಯಂತ ನೆಲೆಸಿರುವ ಹಿಂದೂ ಬಾಂಧವರು ಮತ್ತು ಭಕ್ತರೆಲ್ಲರೂ ಸೇರಿ ಸಂಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಂಡನ್ ನ ಸೈಂಟ್ ಆಲ್ಬನ್ಸ್ ಸಿಟಿಯ ಮೇಯರ್ ಮ್ಯಾಟ್ ಫಿಷರ್ ಮತ್ತು ಕೌನ್ಸಿಲರ್ ಸೀನ್ ಹಗ್ಸ್ ಅವರಿಂದ ಪೌರ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.
ಲಂಡನ್ ಮಹಾನಗರದ ಸಮಸ್ತ ಜನತೆಯ ಪರವಾಗಿ ಮೇಯರ್ ಮ್ಯಾಟ್ ಫಿಷರ್ ಅವರು ಶ್ರೀಗಳಿಗೆ ಅಭಿನಂದನಾ ಪತ್ರ ಸಲ್ಲಿಸಿ  ಗೌರವಿಸಿದರು.  
ಡಾ.ಯೋಗೀಂದ್ರ ಭಟ್ ಉಳಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕೇಶವ್ ತುಕಾರಾಮ್ ಅಭಿನಂದನಾ ಭಾಷಣವನ್ನು ಮಾಡಿದರು. ಶ್ರೀ ಮಠದ ಲಂಡನ್ ಶಾಖೆಯ ಪ್ರಧಾನ ಅರ್ಚಕ ಗಣೇಶ್ ಭಟ್ ಮತ್ತು  ಪ್ರಭಂಜನ್ ವೇದ ಘೋಷದೊಂದಿಗೆ ಗುರುವಂದನಾ ಕಾರ್ಯಕ್ರಮ ನಿರ್ವಹಿಸಿದರು. ಸ್ಥಳೀಯ ಗಣ್ಯರಾದ  ಸುಬ್ರಹ್ಮಣ್ಯ ರಾಮಚಂದ್ರ, ಮುಕೇಶ್ ರಾವ್, ಪ್ರವೀಣ್ ರಾವ್, ಡಾ. ಮಧು ಕೊಪ್ಪ, ನವನೀತ್ ಇತರರು ಉಪಸ್ಥಿತರಿದ್ದರು.
ಪೌರ ಸನ್ಮಾನ ಸಭೆಯ ಬಳಿಕ ನಿತಿನ್ ಬಾಳಿಗಾ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
"

ಸುಗುಣೇಂದ್ರ ಶ್ರೀಗಳ ಅಪೂರ್ವ ಸಾಧನೆಗಳ ಬಗ್ಗೆ ಮಾಧ್ಯಮಗಳ ಮೂಲಕ ನಾನೂ ತಿಳಿದುಕೊಂಡಿದ್ದು ಅವರಿಂದ ಪ್ರಭಾವಿತನಾಗಿದ್ದೇನೆ. ಲಂಡನ್ ನಲ್ಲಿ ಸುಂದರವಾದ ಶ್ರೀಮಠದ ಶಾಖೆ ನಿರ್ಮಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.

— ಮ್ಯಾಟ್ ಫಿಷರ್. ಲಂಡನ್ ನ ಸೈಂಟ್ ಆಲ್ಬನ್ಸ್ ಸಿಟಿಯ ಮೇಯರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net