ಅಂದಾಜು 60 ವರ್ಷದ ವ್ಯಕ್ತಿಯೋರ್ವ ರಕ್ತ ವಾಂತಿ ಆಗುತ್ತಿರುವ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾದರು. ದೀರ್ಘಕಾಲದ ಯಕೃತ್ ಕಾಯಿಲೆ ಮತ್ತು ಪೋರ್ಟಲ್ ಹೈಪರ್ಟೆನ್ಷನ್ನ ಫಂಡಲ್ ವೆರಿಕ್ಸ್ನಿಂದಾಗಿ ಜಠರಗರುಳಿನ ರಕ್ತಸ್ರಾವ ಉಂಟಾಗಿತ್ತು ಪತ್ತೆಯಾಯಿತು. ಗ್ಯಾಸ್ಟ್ರೊಎಂಟರಾಲಜಿ ತಂಡ ಕೆಲವೇ ಗಂಟೆಗಳಲ್ಲಿ ರಕ್ತಸ್ರಾವ ನಿಯಂತ್ರಣಕ್ಕೆ ತಂದರು. ಬಳಿಕ ಅದಕ್ಕೆ ಮೂಲ ಕಾರಣವಾಗಿದ್ದ ರಕ್ತನಾಳದ ಶಂಟ್ಅನ್ನು ಇಂರ್ಟವೆನ್ಷನಲ್ ರೇಡಿಯಾಲಜಿ ತಂಡವು ರಕ್ತನಾಳಗಳ ಒಳಗಿನಿಂದಲೇ ಕಾರ್ಯನಿರ್ವಹಿಸಿ ಮುಚ್ಚಿದರು. ಯಾವ ಹಂತದಲ್ಲಿಯೂ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯ ಬರಲಿಲ್ಲ. ಕೇವಲ ಎಂಡೋಸ್ಕೋಪಿ ಮೂಲಕ ಚಿಕಿತ್ಸೆ ನಿರ್ವಹಿಸಿದರು.